January 12, 2025
IMG-20250101-WA0038

ಮಂಗಳೂರು: ಮಠ ಫಂಡರ್ ಟ್ರಸ್ಟ್ (ರಿ ) ಇದರ ಉದ್ಘಾಟನಾ ಸಮಾರಂಭವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಿರ್ತಡ್ಕ ಇದರ ಮೈದಾನದಲ್ಲಿ ಇಂದು ಅಬ್ದುಲ್ ಖಾದರ್ ಮಿಸ್ಬಾಹ್ ದುವಾ ನೆರವೇರಿಸುವುದರೊಂದಿಗೆ ಚಾಲನೆ ನೀಡಲಾಯಿತು.

ಸ್ವಾಗತ ಭಾಷಣವನ್ನು ಮುಸ್ತಫಾ ಕೆ ಪಿ ಅವರು ನೆರವೇರಿಸಿದರು. ಅಧ್ಯಕ್ಷೀಯ ಭಾಷಣವನ್ನು ಮಾಡಿದ ಹನೀಫ್. ಟಿ. ಟ್ರಸ್ಟಿನ ದ್ಯೇಯೋದ್ದೇಶಗಳನ್ನು ಸವಿಸ್ತಾರವಾಗಿ ನೀಡಿದರು.

ಮುಖ್ಯ ಅತಿಥಿಗಳಾಗಿ ಬಂದಂತಹ ಜನಾಬ್ ಅಬ್ದುಲ್ ರಹಿಮಾನ್ ಪಂಚಾಯತ್ ಸದಸ್ಯರು ಉಪ್ಪಿನಂಗಡಿ ಇವರು ಟ್ರಸ್ಟಿಗೆ ಬೇಕಾಗುವ ಎಲ್ಲಾ ಸಲಹೆ ಸೂಚನೆಗಳನ್ನು ನೀಡಿ ಯಾವಾಗಲೂ ನಿಮ್ಮ ಜೊತೆಗಿದ್ದೇನೆ ಎಂದು ಭರವಸೆ ನೀಡಿದರು.

ಬಂದಂತಹ ಇನ್ನೋರ್ವ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಜೀರ್ ಮಠ ಮಾತನಾಡಿ ಇದು ಕೇವಲ ಕೆರಮೂಲೆ ಮಠಕ್ಕೆ ಸೀಮಿತವಾಗದೆ ಹಿರ್ತಡ್ಕ್ಡ್ಕ ಹಾಗೂ ಕೊಪ್ಪಳಕ್ಕು ಇದರ ಪ್ರಯೋಜನವನ್ನು ನೀಡಿ ಎಂದು ಸಲಹೆ ನೀಡಿದರು ಇನ್ನೋರ್ವ ಅತಿಥಿ ರಶೀದ್ ಯು ಎಂ ಪಂಚಾಯತ್ ಸದಸ್ಯರು ಉಪ್ಪಿನಂಗಡಿ ಮಾತನಾಡಿ ಸರಕಾರದಿಂದ ಬರುವಂತಹ ಎಲ್ಲಾ ಸೌಲಭ್ಯಗಳನ್ನು ನಿಮ್ಮ ಟ್ರಸ್ಟ್ ಮುಖಾಂತರ ಅದರ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಸಲಹೆ ಸೂಚನೆ ನೀಡಿದರು. ಇನ್ನೋರ್ವ ಅತಿಥಿ ವಕೀಲರಾದ ಸುಬ್ರಾಯರವರು ಈ ಟ್ರಸ್ಟಿನ ಪ್ರಯೋಜನಗಳು ಎಲ್ಲಾ ಜಾತಿ ಧರ್ಮಗಳಿಗೆ ಪ್ರಯೋಜನವಾಗಲಿ ಎಂದು ಹಾರೈಸಿದರು ಇನ್ನೋರ್ವ ಅತಿಥಿ ನಾಸಿರ್ ವೈ ಯನ್ ಕೆ ಮಾತನಾಡಿ ನನ್ನ ಶಕ್ತಿ ಮೀರಿ ನಿಮ್ಮೊಂದಿಗೆ ಸಹಕರಿಸುವೆನು ಎಂದು ಶುಭ ಹಾರೈಸಿದರು ವೇದಿಕೆಯಲ್ಲಿ ಮಜೀದ್ ಯು ಎಮ್
ಆದಮ್ ಬಾವ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾದಂತಹ ಸಬೀರ್ ಎಂಬಿ ಉಪಸ್ಥಿತರಿದ್ದರು ಹಾಗೂ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು ಊರಿನ ಹಿರಿಯ ಕಿರಿಯ ವ್ಯಕ್ತಿಗಳು ಭಾಗವಹಿಸಿದರು. ಆರಂಭದಿಂದ ಕೊನೆಯವರೆಗೂ ಸಫ್ವಾನ್ ಪಿಲಿಕಲ್ ನಿರೂಪಣೆ ಮಾಡಿದರು ಹಾಗೂ ನೌ ಸಾದ್ ಎಚ್ ಎನ್ ಧನ್ಯವಾದ ಸಮರ್ಪಣೆಗೈದರು.‌