April 17, 2025

ಬೆಂಗಳೂರು: MMYC (R )Bengaluru ಇದರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಬೆಂಬಲದೊಂದಿಗೆ ಕೇಂದ್ರ ಸರ್ಕಾರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದ್ ವಿರುದ್ಧ ಬೃಹತ್ ಪ್ರತಿಭಟನೆ ಬೆಂಗಳೂರು ಫ್ರೀಡಂಪಾರ್ಕ್ ನಲ್ಲಿ ನಡೆಯಿತು.

ವಕೀಲರಾದ ಇರ್ಶಾದ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿದರು.

ವೇದಿಕೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಶಿವ ಸುಂದರ್, ನಿವೃತ್ತ ಡಿಸಿಪಿ ಜಿ ಎ ಬಾವಾ, ಯುವ ಮುಖಂಡರಾದ ಸುಹೈಲ್ ಕಂದಕ್, ಉದ್ಯಮಿ ಶಬ್ಬೀರ್ ಬ್ರಿಗೇಡ್, ಅಖಿಲಾ ಸಂದ್ರ,ಕೆಪಿಸಿಸಿ ವಕ್ತಾರರಾದ ಮುನೀರ್ ಜನ್ಸಾಲೆ,ಸಹಿತ ಹಲವರು ಕೇಂದ್ರ ಸರ್ಕಾರದ ಜಾರಿಗೆ ತರಲು ಹೊರಟಿರುವ, ಸಂವಿಧಾನ ವಿರೋಧಿ ವಕ್ಷ್ ತಿದ್ದುಪಡಿ ಕಾಯ್ದೆ ವಿರುದ್ಧ ಈ ಹೋರಾಟ ಆರಂಭ ಆಗಿದೆಯಷ್ಷೆ ಇನ್ನು ಮುಂದಕ್ಕೆ ಯಾವ ಜೀವ ತೆತ್ತಾದರೂ ಈ ಕಾಯ್ದೆಯನ್ನು ರದ್ದುಗೊಳಿಸುವ ವರೆಗೆ ಸರ್ವಧರ್ಮಿದವರನ್ನು ಸೇರಿಸಿ ಹೋರಾಟಕ್ಕೆ ಇಳಿಯಲಾಗುವುದು ಎಂದು ದಿಕ್ಸೂಚಿಯಾಗಿ ಮಾತಾಡಿದರು.

ಎಂ,ಎಂ,ವೈ,ಸಿ ಗೌರವಾಧ್ಯಕ್ಷರಾದ ಉಮ್ಮರ್ ಹಾಜಿ, ಸಿರಿಮನೆ ನಾಗರಾಜ್, ನಮ್ಮ ಧ್ವನಿ ಮಹೇಶ್ ನಾಯಕ್, MMYC ಅಧ್ಯಕ್ಷರಾದ ಅಬೂಬಕ್ಕರ್ H , ಅಶ್ರಫ್ ಸಅದಿ ಮಲ್ಲೂರು, ಎಂ ಎಂ ವೈ ಸಿ ಬೆಂಗಳೂರು ಇದರ ಪದಾಧಿಕಾರಿಗಳು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು. ಲತೀಫ್ ಬಿಕೆ ಕಾರ್ಯಕ್ರಮ ನಿರೂಪಿಸಿದರು, ಕೊನೆಗೆ ರಿಯಾಝ್ ಮಾಂತೂರು ಧನ್ಯವಾದ ಅರ್ಪಿಸಿದರು.