ಬಂಟ್ವಾಳ: ಕಳೆದ ಮೂರು ವಾರಗಳಿಂದ ತೀವ್ರತರ ಪಡೆದಿದ್ದ ಮಳೆಯ ಪರಿಣಾಮ ಹಾನಿ, ಪ್ರವಾಹದಿಂದ ಜನಜೀವನ ತತ್ತರಿಸಿತ್ತಾದರೂ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ಆರ್ಭಟ ಜೋರಾಗಿದೆ. ಇದರ ಪರಿಣಾಮ ಕೆಲ ಪ್ರದೇಶದ ಮನೆಗಳಿಗೆ ಹಾನಿಯಾಗಿದೆ.
ನಿರಂತರ ಮಳೆಯ ಪರಿಣಾಮದಿಂದ ಕೂಳ್ನಾಡು ಗ್ರಾಮದ ಸಾಲೆತ್ತೊರು ಕಟ್ಟೆಯಲ್ಲಿ ಬರೆ ಕುಸಿತದಿಂದ ಕೆಲವೊಂದು ಮನೆಗಳಿಗೆ ಹಾನಿ ಸಂಭವಿಸಿದ್ದು ಜನರಲ್ಲಿ ಆತಂಕ ಎದುರಾಗಿದೆ , ಕೆಲ ಮನೆಗಳು ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ಇಂದು ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಪರಿಶೀಲನೆ ನಡೆಸಿದರು.