ಬಂಟ್ವಾಳ:ಟೈಕಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಬಂಟ್ವಾಳ ತಾಲೂಕಿನ ಅಕ್ಕರಂಗಡಿ ನಿವಾಸಿ ಆಯಿಷಾ ಝೊಹರ ಮನಗೆ ಇಂದು ಮಾಜಿ ಶಾಸಕ ಮೊಯ್ದೀನ್ ಬಾವ ಭೇಟಿ ನೀಡಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಬಾವ ಬಲಿಷ್ಠ ಮಲೇಶಿಯದ ಸ್ಪರ್ಧಿಯ ಸೋಲಿಸಿ ದೇಶದ ಕೀರ್ತಿ ಪತಾಕೆ ಹಾರಿಸಿದ ಝೊಹರಳ ಸಾಧನೆಯನ್ನು ಮೆಚ್ಚುವಂತದೆ ಎಂದು ಹೇಳಿದರು.
ಬಡ ಕುಟುಂಬದಿಂದ ಬಂದ ಝೊಹರ ತನ್ನ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದವಳು.
ಎಲ್ಲಾರು ಒಟ್ಟು ಕೈ ಜೋಡಿಸಿ ಹುಡುಗಿಗೆ ಆರ್ಥಿಕವಾಗಿ ಜಾತಿ ಮತ ಭೇದವಿಲ್ಲದೆ ಸಹಕರಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ವಿಫಾ ಇಂಡಿಯಾ ಓಪನ್ ಇಂಟರ್ನ್ಯಾಷನಲ್ ಟೇಕ್ವಾಂಡೋ ಚಾಂಪಿಯನ್‌ಶಿಪ್ -2024 ಪಂದ್ಯಾವಳಿಯಲ್ಲಿ
ಆಯಿಷಾ ಜೋಹರಾ ಗೆ ಚಿನ್ನದ ಪದಕ ಲಭಿಸಿತ್ತು.
ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ , ಆಯಿಷಾ ಜೋಹರಾ ಸತತ ಅಭ್ಯಾಸ ಮಾಡುತ್ತಿದ್ದು ತನ್ನ ಪ್ರಥಮ ಪ್ರಯತ್ನದಲ್ಲೇ ಅಮೋಘ ಚಿನ್ನದ ಪದಕದ ಸಾಧನೆ ಮಾಡಿದ್ದಾಳೆ. ಇವರಿಗೆ ಸವಾದ್ ನಂದಾವರ, ಆಸೀಫ್ ಕಿನ್ಯ ಮತ್ತು ಶಿಹಾಬ್. ಟಿ. ತರಬೇತುದಾರರು ಆಗಿದ್ದರೆ.
ಈ ಸಂದರ್ಭದಲ್ಲಿ ಅಬೂಬಕ್ಕರ್ ಟಿ.ಎಂ, ಅಬೂಬಕ್ಕರ್ ಬಿ.ಎಂ,ರಿಯಾಝ್ ಅಬ್ದುಲ್ಲಾ, ಜಾಕೀರ್ ಬಾಂಬೆ, ಮ್ಯಾಕ್ ಹಬೀಬ್, ಪುರಸಭೆ ಮಾಜಿ ಸದಸ್ಯರಾದ ಅಹ್ಮದ್ ಬಷೀರ್ ಪಿಎಸ್, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಪಿ.ಎಸ್ ಅಬ್ದುಲ್ ಗಫೂರ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾದ ಸುಲೈಮಾನ್, ಪಾಣೆಮಂಗಳೂರು ಕಾಂಗ್ರೆಸ್ ವಲಯ ಅಧ್ಯಕ್ಷರಾದ ಇಕ್ಬಾಲ್ ಜೆ.ಟಿ.ಟಿ ನಿಸಾರ್ ರಿಜ್ವಾನ್ ಮತ್ತು ಊರಿನ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು