January 12, 2025
IMG-20250102-WA0003

ದಕ್ಷಿಣ ಕನ್ನಡ : ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಮುಸ್ಲಿಂ ಲೀಗ್ ಹಿರಿಯ ಮುಖಂಡರಾದ ಎ.ಎಸ್.ಇ ಕರೀಮ್ ಕಡಬ ಅವರ ಅನುಸ್ಮರಣಾ ಸಂಗಮವು ಮಂಗಳೂರಿನ ಕಂಕನಾಡಿಯಲ್ಲಿರುವ ಜಂ-ಇಯ್ಯತ್ತುಲ್ ಫಲಾಹ್ ನಲ್ಲಿ ನಡೆಯಿತು.

ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾದ ಸಿ.ಅಬ್ದುರ್ರಹ್ಮಾನ್ ಮಂಗಳೂರು ಅನುಸ್ಮರಣಾ ಸಂಗಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು “ಕರೀಂ ಕಡಬ ರವರು ಮರಣದಿಂದ ಪಕ್ಷಕ್ಕೆ ಹಾಗೂ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ನುಡಿದರು’.

ಸಯ್ಯಿದ್ ಅಫ್ಹಾಂ ತಂಙಳ್ ಪ್ರಾರ್ಥನೆ ನೆರವೇರಿಸಿ ‘ಕರೀಂ ಸಾಬ್ ಸಮಾಜಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟ ಎಂದರು”

ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಮಾತನಾಡಿ ‘ಕರೀಂ ಒಬ್ಬ ಜ್ಞಾನದ ಬಂಡಾರಿ ಅವರ ಮರಣ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ನುಡಿದರು’. ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ ಮಾತನಾಡಿ ‘ಹುಟ್ಟಿದ ಮೇಲೆ ಸಾಯಲೇ ಬೇಕು ಸಾವಿನ ಮುಂಚೆ ಬದುಕಿರುವಾಗ ನಾವು ಮಾಡಿದ ಸೇವೆ ಹಾಗೂ ಸಾಧನೆ ಶಾಶ್ವತ ವಾಗಿರಬೇಕು ಎಂದರು’

ಎ.ಎಸ್.ಇ ಕರೀಮ್ ಕಡಬ ಅವರ ಸುಪುತ್ರ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಲಾಹುದ್ಧೀನ್ ಅಯ್ಯೂಬಿ ಕಡಬ ಮುಖ್ಯ ಪ್ರಭಾಷಣಗೈದರು.ಮುಸ್ಲಿಂ ಲೀಗ್ ಜಿಲ್ಲಾ ಉಪಾಧ್ಯಕ್ಷರಾದ ಇಸ್ಮಾಯಿಲ್ ಎಚ್ ಕೆ ಎಸ್ ಎಚ್ ಹಾಜಿ ಹಮೀದ್ ಕುಂಡಾಲ ಹಿರಿಯ ಸದಸ್ಯರಾದ ಕರಾಮತ್ ಕುಡುಪಾಡಿ {ಕೆಸಿ} ಅಬ್ದುಲ್ ಖಾದರ್ ಕಾವೂರ್ ಮಾಜಿ ಕಾರ್ಯದರ್ಶಿ ವಿ ಅಬ್ದುಲ್ ಖಾದರ್ ಕಂಕನಾಡಿ ಮುಸ್ಲಿಂ ಯೂತ್ ಲೀಗ್ ರಾಜ್ಯ ನಾಯಕರಾದ ಶಬೀರ್ ಅಬ್ಬಾಸ್ ತಲಪಾಡಿ ಹಾಗೂ msf ಜಿಲ್ಲಾಧ್ಯಕ್ಷರಾದ ಝುಲ್ಛಿಕರ್ ಅಲೀ ಎಚ್.ಕಲ್ಲು ಅವರು ಅನುಸ್ಮರಣಾ ಭಾಷಣಗೈದರು. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ನೌಶಾದ್ ಮಲಾರ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು. ವಂದಿಸಿದರು. ಈ ಸಂದರ್ಭದಲ್ಲಿ ಕರೀಮ್ ಕಡಬ ಅವರ ಕುಟುಂಬಸ್ಥರು ಮತ್ತು ಜಿಲ್ಲಾ ಮುಸ್ಲಿಂ ಲೀಗ್ ನಾಯಕರು ಉಪಸ್ಥಿತರಿದ್ದರು.