March 2, 2026
gold-2025-11-eb46806c3e3df82a4a3d39d30a08376d-3x2

ಅಮೆರಿಕ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಇದರಿಂದಾಗಿ ಕಚ್ಚಾ ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಇದೇ ಹಾದಿಯಲ್ಲಿ ಚಿನ್ನದ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಹತ್ತು ಗ್ರಾಂ ಚಿನ್ನದ ದರ ರೂ. 2 ಲಕ್ಷದ ಗಡಿ ದಾಟಬಹುದು ಎಂಬ ಅಂದಾಜುಗಳಿವೆ.

ಫೆಬ್ರವರಿ ಆರಂಭದಲ್ಲಿ ಸ್ವಲ್ಪ ಕುಸಿದಿದ್ದ ಚಿನ್ನದ ಬೆಲೆಗಳು, ಇರಾನ್-ಯುಎಸ್ ಯುದ್ಧದಿಂದಾಗಿ ಮತ್ತೆ ಏರಿಕೆಯಾಗಲು ಪ್ರಾರಂಭಿಸಿವೆ. ಈ ಆವೇಗ ಮುಂದುವರೆದಿದೆ. ಮದುವೆಗಳ ಸೀಸನ್ ಆಗಿರೋದ್ರಿಂದ, ಹೆಚ್ಚಿನ ಜನರು ಚಿನ್ನವನ್ನ ಖರೀದಿಸಲು ಒಲವು ತೋರುತ್ತಾರೆ. ಆದರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂದು ಕಂಡುಹಿಡಿಯೋಣ.

ಶುದ್ಧ ಚಿನ್ನ ಎಂದು ಕರೆಯಲ್ಪಡುವ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 7,140 ರೂ.ಗಳಷ್ಟು ಏರಿಕೆಯಾಗಿ 1,68,710 ರೂ.ಗಳಷ್ಟು ವಹಿವಾಟು ನಡೆಸುತ್ತಿದೆ. ಚಿನ್ನದ ಆಭರಣಗಳಲ್ಲಿ ವ್ಯಾಪಕವಾಗಿ ಬಳಸಲಾಗುವ 22 ಕ್ಯಾರೆಟ್ ಚಿನ್ನದ ಬೆಲೆ 6,550 ರೂ.ಗಳಷ್ಟು ಏರಿಕೆಯಾಗಿ 1,54,650 ರೂ.ಗಳಷ್ಟು ವಹಿವಾಟು ನಡೆಸುತ್ತಿದೆ. 18 ಕ್ಯಾರೆಟ್ ಚಿನ್ನದ ವಿಷಯಕ್ಕೆ ಬಂದ್ರೆ, 5,350 ರೂ.ಗಳಷ್ಟು ಏರಿಕೆಯಾಗಿ 1,26,530 ರೂ.ಗಳಷ್ಟು ವಹಿವಾಟು ನಡೆಸುತ್ತಿದೆ.

ಶನಿವಾರ ಮತ್ತು ಭಾನುವಾರ ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ಮುಚ್ಚಿದ್ದರಿಂದ ಚಿನ್ನದ ಬೆಲೆ ಸ್ಥಿರವಾಗಿತ್ತು. ಸದ್ಯ ಎಂಸಿಎಕ್ಸ್‌ ನಲ್ಲಿ ಏಪ್ರಿಲ್ ಫ್ಯೂಚರ್‌ ಗಳ ಚಿನ್ನದ ಬೆಲೆ ಸುಮಾರು 1,61,971 ರೂ.ಗಳಷ್ಟಿದೆ. ಬೆಳ್ಳಿಯ ಬೆಲೆ 2,74,389 ರೂ.ಗಳಷ್ಟಿದೆ. ಆದ್ರೆ, ಸೋಮವಾರ ಭಾರಿ ಏರಿಕೆಯಾಗುವ ಸಾಧ್ಯತೆ ಹೆಚ್ಚು. ಇರಾನ್ ಇಸ್ರೇಲ್ ಯುದ್ಧದ ಪರಿಣಾಮದಿಂದ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಕ್ಷಿಪಣಿ ದಾಳಿಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ಇದರ ಪರಿಣಾಮವಾಗಿ ಚಿನ್ನದ ಬೆಲೆ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಒಂದೇ ದಿನದಲ್ಲಿ 7,000 ಕ್ಕಿಂತ ಹೆಚ್ಚು ಏರಿಕೆಯಾಗಿದ್ದರೆ, ಒಂದು ಕೆಜಿ ಬೆಳ್ಳಿ ಬೆಲೆ ₹25,000 ದಷ್ಟು ಏರಿಕೆಯಾಗಿದೆ. ಕ್ಷಿಪಣಿ ದಾಳಿಗಳಿಂದಾಗಿ ಬುಲಿಯನ್ ಮಾರುಕಟ್ಟೆಯಲ್ಲಿ ರಾತ್ರೋರಾತ್ರಿ ದೊಡ್ಡ ಬದಲಾವಣೆಗಳಾಗಿವೆ.

ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 1ಕ್ಕೆ)

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,871 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,463 ರೂ

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,653 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,871 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,463 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ