

ಮಂಗಳೂರು: ಕೇರಳದ ಮಿಶೀನರಿ ಕಾರ್ಯಕರ್ತೆಯ ರಾದ ವಂದನಾ ಪ್ರಾನ್ಸಿಸ್ ಮತ್ತು ಪ್ರೀತಿ ರವರನ್ನು ಛತ್ತೀಸ್ ಗಡ ಪೊಲೀಸರು ಬಲವಂತ ಮತಾಂತರದ ಆರೋಪದ ಅಡಿಯಲ್ಲಿ ಬಂಧಿಸಿರುವ ಕ್ರಮ ಖಂಡನೀಯ.
ಈ ದೇಶದಲ್ಲಿ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ, ಸ್ವಾತಂತ್ರ್ಯ ಪೂರ್ವ- ಉತ್ತರದಲ್ಲಿ ಕುಗ್ರಾಮಗಳಿಗೆ ತೆರಳಿ ಅಕ್ಷರ ಜ್ಞಾನ, ಆರೋಗ್ಯ ಸೇವೆ ಸಲ್ಲಿಸಿರುವ ಇತಿಹಾಸ ಉಳ್ಳ ಕ್ರೈಸ್ತ ಮಿಷನರಿ ಕಾರ್ಯಕರ್ತೆಯರನ್ನು ಮತಾಂತರ ಆರೋಪ ಹೊರಿಸಿ ಅಕ್ರಮ ಬಂಧನ ಮಾಡಿರುವುದು, ಸಂಘ ಪರಿವಾರದ ಬೆಂಬಲಿತ ಛತ್ತೀಸ್ ಗಡ ಸರಕಾರ ಮತ್ತು ಪೊಲೀಸರ ಆತಿರೇಕತೆಯನ್ನು ಸೂಚಿಸುತ್ತದೆ.
ಕೇರಳದ ಪ್ರೀತಿ ಮತ್ತು ವಂದನಾ ಅವರನ್ನು ಸರಕಾರ ಬಿಡುಗಡೆ ಮಾಡಬೇಕು. ಈ ನಿಟ್ಟಿನ ಸರ್ವ ಪ್ರಯತ್ನಗಳು ಆಗಲಿ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಅಭಿಪ್ರಾಯ ವ್ಯಕ್ತಪಡಿಸಿದರು.