ಅರಂತೋಡು: ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ನದಿಗೆ ಹಾರಿದ ಯುವಕನ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಮೃತ ಯುವಕನನ್ನು ಅಜ್ಜಾವರ ಗ್ರಾಮದ ಮಾವಿನಪಳ್ಳ ನಿವಾಸಿ ಮಹಮ್ಮದ್ ಎಂಬವರ ಪುತ್ರ ಸಿನಾನ್ (30) ಎಂದು ಗುರುತಿಸಲಾಗಿದೆ.
ಸಿನಾನ್ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗುತ್ತಿದ್ದು, ಈ ಹಿಂದೆಯೂ ಆತ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸೋಮವಾರ ಸುಳ್ಯಕ್ಕೆ ತೆರಳಿದ್ದ ಈತ ಮನೆಗೆ ಮರುಳುವ ಸಂದರ್ಭದಲ್ಲಿ ಕಾಂತಮಂಗಲ ಸೇತುವೆಯಿಂದ ನದಿಗೆ ಧುಮುಕಿದ್ದಾನೆ ಎಂದು ತಿಳಿದು ಬಂದಿದೆ.
ಗೂಡಿನಬಳಿ ನಿವಾಸಿಗಳಾದ ಮೊಹಮ್ಮದ್, ಸಮೀರ್, ಹರೀಸ್ ಮೃತ ದೇಹವನ್ನು ಮೇಲೆ ತರಲು ಸಹಕರಿಸಿದ್ದರು.