ನವದೆಹಲಿ: ದಸರಾ-ದೀಪಾವಳಿ ಹಬ್ಬದ ಸಮಯದಲ್ಲಿ ವ್ಯಾಪಾರ ಹೆಚ್ಚಳದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಕ್ಟೋಬರ್‌ನಲ್ಲಿ ಸಂಗ್ರಹಿಸಿದ ಸರಕು ಮತ್ತು ಸೇವಾ ತೆರಿಗೆ (GST) 1.87 ಲಕ್ಷ ಕೋಟಿ ರೂಪಾಯಿ ಆಗಿದೆ. 2017ರ ಜುಲೈ 1ರಂದು ಜಿಎಸ್ ಟಿ ಜಾರಿಗೆ ಬಂದ ನಂತರ ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ. ಏಪ್ರಿಲ್ 2024 ರಲ್ಲಿ 2.10 ಲಕ್ಷ ಕೋಟಿ ರೂಪಾಯಿ ಅತ್ಯಧಿಕ ಜಿಎಸ್ ಟಿ ಸಂಗ್ರಹವಾಗಿತ್ತು.
ಅಕ್ಟೋಬರ್ ಅಂಕಿಅಂಶ ಪ್ರಕಾರ ಶೇಕಡಾ 8.9ರಷ್ಟು ವಾರ್ಷಿಕ ಬೆಳವಣಿಗೆಯಾಗಿದೆ ಎಂದು ಕಳೆದ ಶುಕ್ರವಾರ ಬಿಡುಗಡೆಯಾದ ಹಣಕಾಸು ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಅಕ್ಟೋಬರ್ 2023 ರಲ್ಲಿ, ಒಟ್ಟು GST ಆದಾಯ 1.72 ಲಕ್ಷ ಕೋಟಿ ರೂಪಾಯಿ ಆಗಿತ್ತು. ಇತ್ತೀಚಿನ ಬೆಳವಣಿಗೆಯು ದೇಶೀಯ ಮಾರಾಟದಲ್ಲಿನ ಏರಿಕೆ ಮತ್ತು ವರ್ಧಿತ ಅನುಸರಣೆಯ ಖಾತೆಯಲ್ಲಿದೆ.