ಮಂಗಳೂರು: ಜೆಪ್ಪು ವಾರ್ಡ್ ನ ಎಂ.ಆರ್. ಭಟ್ ಲೇನ್ ನ ಸುರಕ್ಷಾ ಹಾಸ್ಟೆಲ್ ಬಳಿ ಇರುವ ಅಬ್ದುಲ್ ರಹ್ಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದಿದೆ. ಇದರಿಂದ ಮನೆಗೂ ಹಾನಿಯಾಗುವ ಭೀತಿ ಎದುರಾಗಿದೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಆವರಣ ಗೋಡೆ ಏಕಾಏಕಿ ಕುಸಿದು ಪಕ್ಕದ ರಸ್ತೆಗೆ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಯಾರು ಓಡಾಡುತ್ತಿಲ್ಲದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ.