

ವಿಟ್ಲ: ED ಅಧಿಕಾರಿಗಳ ಸೋಗಿನಲ್ಲಿ 30ಲಕ್ಷ ರೂ. ಸುಲಿಗೆ..!
ವಿಟ್ಲ : ಇಡಿ ಅಧಿಕಾರಿಗಳು ಎಂದು ನಂಬಿಸಿ ಮನೆಗೆ ನುಗ್ಗಿದ ತಂಡ ಬರೋಬ್ಬರಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ಬಂಟ್ವಾಳ ತಾಲೂಕಿನ ನರ್ಶಾ ಎಂಬಲ್ಲಿ ನಡೆದಿದೆ.
ಪ್ರತಿಷ್ಠಿತ ಹೆಸರಾಂತ ಉದ್ಯಮಿ ಸಿಂಗಾರಿ ಬೀಡಿ ಇದರ ಮಾಲೀಕರಾದ ಸುಲೈಮಾನ್ ಅವರ ಮನೆಗೆ ನಿನ್ನೆ ನಕಲಿ ಇಡಿ ದಾಳಿಯಾಗಿದೆ.
ರಾತ್ರಿ ಸರಿಸುಮಾರು 8:30 ಕ್ಕೆ ತಮಿಳುನಾಡು ನೋಂದಣಿ ಸಂಖ್ಯೆ ಇನ್ನೋವಾ ಕಾರ್ ನಲ್ಲಿ ಬಂದ ಖದೀಮರು ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಇವರ ಬಳಿ ಇದ್ದ ಹಣ ಮೊಬೈಲ್ ಹಾಗೂ ದಾಖಲೆ ಪತ್ರವನ್ನು ದೋಚಿ ಪರಾರಿಯಾಗಿದ್ದಾರೆ.
ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಇವರನ್ನು ಕಂಡು ತಕ್ಷಣ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.