

ಲಂಡನ್: ನಾಟಕೀಯ ತಿರುವುಗಳಿಂದ ಕೂಡಿದ್ದ ತೆಂಡುಲ್ಕರ್- ಆ್ಯಂಡರ್‌ಸನ್ ಟೆಸ್ಟ್ ಸರಣಿಯ ಐದನೇ ಪಂದ್ಯದ ಐದನೇ ದಿನ ಭಾರತ ವಿರುದ್ಧ ಇಂಗ್ಲೆಂಡ್ ರೋಚಕ 6 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ 2-2 ರಲ್ಲಿ ಸಮಬಲಗೊಂಡಿದೆ.
ಓವಲ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ನೀಡಿದ್ದ ಬೃಹತ್ ರನ್ ಬೆನ್ನಟ್ಟಿದ ಇಂಗ್ಲೆಂಡ್ ಅಂತಿಮವಾಗಿ 85.1 ಓವರ್‌ಗಳಲ್ಲಿ 367 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗೆಲುವಿಗೆ 374 ರನ್‌ಗಳ ಬೃಹತ್ ಗುರಿಯನ್ನು ಭಾರತ ನೀಡಿತ್ತು. ಬೃಹತ್ ಮೊತ್ತವನ್ನು ಗುರಿ ಬೆನ್ನತ್ತಿದ ಇಂಗ್ಲೆಂಡಿಗೆ ಕೊನೆಯ ದಿನ 4 ವಿಕೆಟ್ ಸಹಾಯದಿಂದ 35 ರನ್ ಬೇಕಿತ್ತು.
ನಾಲ್ಕನೇಯ ದಿನ ಅಜೇಯರಾಗಿದ್ದ ಸ್ಮಿತ್ ನಿನ್ನೆಯ ಮೊತ್ತವಾದ 2 ರನ್‌ಗೆ ಸಿರಾಜ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರೆ ಓವರ್‌ಟನ್ 8 ರನ್‌ಗಳಿಸಿ ಸಿರಾಜ್ ಎಲ್‌ಬಿ ಔಟಾದರು. ಜೋಶ್ ಟಂಗ್ ಅವರು ಪ್ರಸಿದ್ಧ್ ಕೃಷ್ಣ ಬೌಲ್ಡ್ ಮಾಡಿದರು. 10ನೇಯವರಾಗಿ ಗಂಭೀರವಾಗಿ ಗಾಯಗೊಂಡಿದ್ದ ಕ್ರೀಸ್ ವೋಕ್ಸ್ ಮೈದಾನಕ್ಕೆ ಇಳಿದಿದ್ದರು.
ಗಸ್ ಅಟ್ಕಿನ್ಸನ್ ಅವರು ಕ್ರೀಸ್ ವೋಕ್ಸ್‌ಗೆ ಸ್ಟ್ರೈಕ್ ನೀಡುತ್ತಿರಲಿಲ್ಲ. ಸ್ಟ್ರೈಕ್ ನೀಡಿದ್ದರೆ 1 ಕೈಯಲ್ಲಿ ಬ್ಯಾಟ್ ಬೀಸಬೇಕಿತ್ತು. ಓವರ್ ಕೊನೆಯಲ್ಲಿ ಒಂದು ರನ್ ಓಡುವ ಮೂಲಕ ಮತ್ತೆ ಸ್ಟ್ರೈಕ್‌ಗೆ ಬರುತ್ತಿದ್ದರು. ಆದರೆ ಕೊನೆಗೆ ಸಿರಾಜ್ ಗಸ್ ಅಟ್ಕಿನ್ಸನ್ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು.