ಮಂಗಳೂರು: ವಿಕೆಂಡ್ ಹಿನ್ನಲೆ ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ಊರುಗಳತ್ತ ತೆರಳುತ್ತಾರೆ. ಇದರಿಂದ ಸ್ಟೇಟ್ ಬ್ಯಾಂಕ್‌ನ ಸಿಟಿ ಬಸ್ ಸ್ಟ್ಯಾಂಡ್ ತುಂಬಿ ತುಳುಕುತ್ತಿದೆ. ಅಲ್ಲದೆ ಸರಿಯಾದ ಬಸ್ ಇಲ್ಲದೆ ಜನರು ಪರಾದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಮೇಲಿನ ದೃಶ್ಯ ಸ್ಟೇಟ್ ಬ್ಯಾಂಕ್ ನಲ್ಲಿ ಕಳೆದ ಶನಿವಾರ ಕಂಡು ಬಂದಿದ್ದು, ಹೌದು, ಇದು ಸ್ಟೇಟ್ ಬ್ಯಾಂಕ್ ನಲ್ಲಿ ಪ್ರಯಾಣಿಕರ ನಿತ್ಯದ ಗೋಳು… ಸ್ಟೇಟ್ ಬ್ಯಾಂಕ್ ನಲ್ಲಿ ಸಂಜೆ 5 ಗಂಟೆಯ ನಂತರ ಬಸ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಖಾಸಗಿ ಬಸ್ ನವರು ಮಂಗಳೂರಿನಿಂದ ಬಿಸಿ ರೋಡ್ ಬಿಟ್ಟರೆ ಬೇರೆಲ್ಲೂ ನಿಲ್ಲಿಸಲ್ಲ. ಇದರಿಂದ ಫರಂಗಿಪೇಟೆ, ತುಂಬೆ ಭಾಗದ ಜನರು ಅನಿವಾರ್ಯವಾಗಿ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಹೋಗಬೇಕಾಗುತ್ತೆ.. ಅಲ್ಲದೆ ಪುತ್ತೂರು, ವಿಟ್ಲ ಭಾಗದಲ್ಲಿ ಹೋಗುವುದಾದರೆ ಬಸ್ ಗಳ ಸಂಖ್ಯೆ ಕಡಿಮೆ ತೀರಾ ಇದೆ. ಬಸ್ ಇದ್ರೂ ನೂಕೂನುಗ್ಗಳಿಂದ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಇಷ್ಟೊಂದು ಹರಸಾಹಸ ಪಡಬೇಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಈ ನಡುವೆ ಬಸ್ ಶೆಲ್ಟರ್ ಸಮಸ್ಯೆ ಗಂಭೀರವಾಗಿ ಪರಿಣಮಿಸಿದೆ.
ಹಲವು ವರ್ಷಗಳಿಂದ ದುರಸ್ತಿಗಾಗಿ ಕಾಯುತ್ತಿದ್ದ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣವನ್ನು ಸುಮಾರು 4.2 ಕೋಟಿ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ, ಮುಡಾದಿಂದ ಅಭಿವೃದ್ಧಿಗೊಳಿಸಲಾಗುತ್ತಿದೆ. ಬಸ್ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡರೂ, ಬಸ್ ಶೆಲ್ಟರ್ ಮಾತ್ರ ಇನ್ನೂ ನಿರ್ಮಾಣಗೊಂಡಿಲ್ಲ.
ಸ್ಟೇಟ್ ಬ್ಯಾಂಕ್ ನಿಂದ ಬಂಟ್ವಾಳ ಕಡೆಗೆ ಹೋಗುವ ಬಸ್ ನಿಲ್ದಾಣದ ಬಳಿ ಇನ್ನು ಕೂಡ ಬಸ್ ಶೆಲ್ಟರ್ ಇಲ್ಲ. ಬಿಸಿಲು, ಮಳೆ ಗಾಳಿ ಬಂದರು ಫುಟ್ ಬಾತ್, ಅಂಗಡಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣಾಗಿದೆ.
ಜಿಲ್ಲಾಡಳಿತ ಈ ಕೂಡಲೇ ಎರಡೂ ಸಮಸ್ಯೆಗಳನ್ನು ಬಗೆಹರಿಸಿ ಸೂಕ್ತವಾದ ವ್ಯವಸ್ಥೆ ಮಾಡಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.