ಪುತ್ತೂರು : ಪುತ್ತೂರು ಸಾಹಿತ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ತುಮಕೂರು ಮಾತೃಭೂಮಿ ಸೇವಾ ಟ್ರಸ್ಟ್ ಇದರ ವತಿಯಿಂದ ಕೊಡಮಾಡುವ ಸೇವಾರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತೂರು ಅಳಕೆಮಜಲು ನಿವಾಸಿ ಬಾತೀಶ್ ಅಳಕೆಮಜಲು ರವರು ಆಯ್ಕೆಗೊಂಡಿದ್ದಾರೆ.
ತುಮಕೂರು ಮಾತೃಭೂಮಿ ಸೇವಾ ಟ್ರಸ್ಟ್ ವರ್ಷಂಪ್ರತಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತಲಾ ಒಬ್ಬರಂತೆ ಆಯ್ಕೆ ಮಾಡಿ ಮಾತೃಭೂಮಿ ಸೇವಾ ರತ್ನ ಪ್ರಶಸ್ತಿ ನೀಡುತ್ತಾ ಬಂದಿದ್ದು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಮಾಜಿಕ ಹೋರಾಟಗಾರ ಪುತ್ತೂರಿನ ಬಾತೀಶ್ ಅಳಕೆಮಜಲು ರವರನ್ನು ಆಯ್ಕೆ ಮಾಡಿದೆ ಭಾತೀಶ್ ಅಳಕೆಮಜಲು ಅವರನ್ನು ವಿದ್ಯಾರ್ಥಿ ಹೋರಾಟ ಮತ್ತು ಶೈಕ್ಷಣಿಕ , ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ ಆಯ್ಕೆಮಾಡಲಾಗಿದೆ ಎಂದು ಮಾತೃಭೂಮಿ ಸೇವಾ ಟ್ರಸ್ಟ್ ಸಂಸ್ಥಾಪಕಿ ಡಾ. ಜ್ಯೋತಿ ಶ್ರೀನಿವಾಸ್ ತಿಳಿಸಿದ್ದಾರೆ.