ಮುಂಬೈ: ಅಮೆರಿಕದಲ್ಲಿ ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ವಾರದ ಮೊದಲ ವಹಿವಾಟಿನ ದಿನವಾದ ಆಗಸ್ಟ್ 5ರಂದು ಸೆನ್ಸೆಕ್ಸ್ 2,222 ಪಾಯಿಂಟ್ಸ್ (2.74%) ಕುಸಿದು 78,759ರಲ್ಲಿ ಕೊನೆಗೊಂಡಿದೆ. ನಿಫ್ಟಿ ಸಹ 662 ಪಾಯಿಂಟ್ಸ್ (2.68%) ಕುಸಿದು 24,055ರ ಮಟ್ಟದಲ್ಲಿ ಕೊನೆಗೊಂಡಿದೆ. ಅಲ್ಲಿಗೆ ಇಂದು ಒಂದೇ ದಿನದಲ್ಲಿ ಹೂಡಿಕೆದಾರರು 16 ಲಕ್ಷ ಕೋಟಿ ರೂ. ಕಳೆದುಕೊಂಡಂತಾಗಿದೆ.ಇಂದಿನ ವಹಿವಾಟಿನಲ್ಲಿ ನಿಫ್ಟಿ ರಿಯಾಲ್ಟಿ, ಲೋಹ, ಸರ್ಕಾರಿ ಬ್ಯಾಂಕ್ ಮತ್ತು ಮಾಧ್ಯಮ ಸೂಚ್ಯಂಕವು ಶೇಕಡಾ 4ಕ್ಕಿಂತ ಹೆಚ್ಚು ಕುಸಿದಿದೆ. ಹಾಗೆಯೇ ಆಟೋ, ಐಟಿ ಮತ್ತು ತೈಲ ಮತ್ತು ಅನಿಲ ಸೂಚ್ಯಂಕಗಳು ಶೇಕಡಾ 3ಕ್ಕಿಂತ ಹೆಚ್ಚು ಕುಸಿದವು. ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಎಸ್‌ಬಿಐ ಮತ್ತು ಪವರ್ ಗ್ರಿಡ್ ಸೆನ್ಸೆಕ್ಸ್ನಲ್ಲಿ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಸಹ ಸುಮಾರು ಶೇ 4ರಷ್ಟು ಕುಸಿದವುಬಿಎಸ್ಇಯ ಮಿಡ್-ಕ್ಯಾಪ್ ಸೂಚ್ಯಂಕವು 1,718 ಪಾಯಿಂಟ್ಗಳ (3.60%) ನಷ್ಟದೊಂದಿಗೆ 45,956 ಮಟ್ಟದಲ್ಲಿ ಕೊನೆಗೊಂಡಿತು. ಸ್ಮಾಲ್ ಕ್ಯಾಪ್ ಸೂಚ್ಯಂಕವು 2,297 ಪಾಯಿಂಟ್ಗಳಿಗಿಂತ ಹೆಚ್ಚು ಕುಸಿದಿದೆ. ಇದು ಶೇಕಡಾ 4.21ರಷ್ಟು ಕುಸಿದು 52,331 ಮಟ್ಟಕ್ಕೆ ತಲುಪಿದೆ. ಬಿಎಸ್ಇ ಲಾರ್ಜ್ಕ್ಯಾಪ್ ಸೂಚ್ಯಂಕ ಶೇಕಡಾ 2.77ರಷ್ಟು ಕುಸಿದಿದೆ.ಹೂಡಿಕೆದಾರರಿಗೆ 16 ಲಕ್ಷ ಕೋಟಿ ರೂ. ನಷ್ಟ ಷೇರು ಮಾರುಕಟ್ಟೆಯಲ್ಲಿನ ತೀವ್ರ ಮಾರಾಟದಿಂದಾಗಿ ಹೂಡಿಕೆದಾರರ ಸಂಪತ್ತು 16 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಆಗಸ್ಟ್ 5 ರ ಸೋಮವಾರ, ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 441 ಲಕ್ಷ ಕೋಟಿ ರೂ.ಗೆ ಇಳಿದಿದೆ. ಇದು ಶುಕ್ರವಾರ ಸುಮಾರು 457 ಲಕ್ಷ ಕೋಟಿ ರೂ. ಆಗಿತ್ತು.