ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪಟ್ಟಿಯನ್ನು ಇಂದು (ಸೋಮವಾರ) ಪ್ರಕಟಿಸಿದೆ.
61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ.
ರಾಜ್ಯ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವಂತ ಪಟ್ಟಿಯಲ್ಲಿ ನಗರಸಭೆಯಾದಂತ ಅಫಜಲಪುರಕ್ಕೆ ಅಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಜನರಲ್, ಆನೇಕಲ್ ಗೆ ಅಧ್ಯಕ್ಷ ಸ್ಥಾನ ಜನರಲ್ ಮಹಿಳೆ, ಉಪಾಧ್ಯಕ್ಷ ಸ್ಥಾನ ಜನರಲ್, ಅಂಕೋಲಾಕ್ಕೆ ಅಧ್ಯಕ್ಷ ಸ್ಥಾನ ಜನರಲ್, ಉಪಾಧ್ಯಕ್ಷ ಸ್ಥಾನ ಜನರಲ್ ಮಹಿಳೆಗೆ ಮೀಸಲಿರಿಸಲಾಗಿದೆ. ಆ ಪಟ್ಟಿ ಈ ಕೆಳಗಿನಂತಿದೆ.