ಉಡುಪಿ: ಮಣಿಪಾಲದಲ್ಲಿ ವ್ಯಕ್ತಿಯ ಇರಿದು ಕೊಲೆ ಮಾಡಿದ ಘಟನೆ ಮಣಿಪಾಲದ ಅನಂತ ಕಲ್ಯಾಣ ನಗರದಲ್ಲಿ ನಡೆದಿದೆ. ಬಿಯರ್ ಬಾಟಲಿ ಒಡೆದು ಕತ್ತಿಗೆ ಚುಚ್ಚಿ ಕೊಲೆ ಮಾಡಲಾಗಿದೆ. ಹೋಟೆಲ್ ಕಾರ್ಮಿಕ ಶ್ರೀಧರ ಕಾಸರಕೋಡು ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಕೋಡು ನಿವಾಸಿ ಯಾಗಿದ್ದಾರೆ ಕೊಲೆಯಾದವರು.ಕೊಲೆ ಯಾವ ಕಾರಣಕ್ಕೆ ನಡೆದಿದೆ ಮತ್ತು ಯಾರು ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ಉಡುಪಿ ಎಸ್‌ಪಿ ಡಾ. ಕೆ.ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಣಿಪಾಲ ಇನ್‌ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬೆನ್ನುಬಿದ್ದಿದ್ದಾರೆ. ಸ್ಥಳೀಯರ, ಪರಿಚಯಸ್ಥರ ವಿಚಾರಣೆ ನಡೆಯುತ್ತಿದೆ.