ಉಳ್ಳಾಲ: ಉಳ್ಳಾಲ ಸಮೀಪ ಲಾರಿ-ಬೈಕ್ ಅಪಘಾತದಲ್ಲಿ ಮೆಡಿಕಲ್ ಮಾಲೀಕ ದಾರುಣವಾಗಿ ಮೃತಪಟ್ಟ ಘಟನೆ ನಾಟೆಕಲ್ ಹತ್ತಿರದ ತಿಬ್ಲಪದವು ಎಂಬಲ್ಲಿ ಈ ಘಟನೆ ನಡೆದಿದೆ.
ದೇರಳಕಟ್ಟೆ ನಿವಾಸಿ ಮೆಡಿಕಲ್ ಸೆಂಟರ್ ಮಾಲೀಕ ಜಲೀಲ್ ಎಂಬವರ ಪುತ್ರ ಹಾಜಿರಾ ಮೆಡಿಕಲ್ ಮಾಲೀಕ ಅವ್ಸಾಫ್ (25) ಮೃತಪಟ್ಟವರು. ಸೋಮವಾರ ಮಧ್ಯಾಹ್ನ ದೇರಳಕಟ್ಟೆ ಕಡೆಯಿಂದ ತಿಬ್ಲಪದವು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ತಿಬ್ಲಪದವಿನ ಡಿವೈಡರ್ ಸಮೀಪ ಲಾರಿಯೊಂದು ಹಠಾತ್ತನೆ ತಿರುಗಿದ ಪರಿಣಾಮ ಲಾರಿ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಅವ್ಸಾಫ್ ಮೃತಪಟ್ಟಿದ್ದಾರೆ.
ಕೆಲ ವರ್ಷಗಳ ಹಿಂದಷ್ಟೇ ಕಲಿಕೆ ಮುಗಿಸಿ ಅವ್ಸಾಫ್ ದೇರಳಕಟ್ಟೆ ಜಂಕ್ಷನ್‌ನಲ್ಲಿ ಮೆಡಿಕಲ್ ಅಂಗಡಿಯ ನಡೆಸುತ್ತಾ ಬಂದಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತ ಸಿಸಿಟಿವಿ ವಿಡಿಯೋ ಸೆರೆಯಾಗಿದೆ.