ಮಂಗಳೂರು: ದ.ಕ.ಜಿಲ್ಲಾ ಎ.ಐ.ಕೆ.ಎಂ.ಸಿ.ಸಿ ನೇತಾರರು ಭೂಕುಸಿತ ಮತ್ತು ಪ್ರವಾಹದಿಂದ ತುತ್ತಾದ ಕೇರಳದ ವಯನಾಡ್ ಪ್ರದೇಶಕ್ಕೆ ಭೇಟಿ ನೀಡಿದರು.
ದುರಂತ ಸ್ಥಳದಲ್ಲಿ ಸೇವೆಗೈಯ್ಯುತ್ತಿರುವ ಎಲ್ಲಾ ಸಂಘ ಸಂಸ್ಥೆಗಳ ಸ್ವಯಂ ಸೇವಕರಿಗೆ ಬೇಕಾಗುವ ಕುಡಿಯುವ ನೀರು ಮತ್ತು ರೈನ್ ಕೋಟ್ ವಿತರಿಸಲಾಯಿತು. ನಂತರ ಸಂತ್ರಸ್ತರು ಇರುವ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ದ,ಕ,ಜಿಲ್ಲಾ ಎ.ಐ.ಕೆ.ಎಂ.ಸಿ.ಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಫ್ಹಾಂ ಅಲೀ,ಹನೀಫ್ ಮುಖ್ವೆ, ಹನೀಫ್ ಹಾಜಿ ಉದಯ ಪುತ್ತೂರು ,ಸುಳ್ಯ ಎ.ಐ.ಕೆ.ಎಂ.ಸಿ.ಸಿ ಅಧ್ಯಕ್ಷರಾದ ಖಲಂದರ್ ಎಲಿಮಲೆ, ಸುಳ್ಯ ತಾಲೂಕಿನ ಎ.ಐ.ಕೆ.ಎಂ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ತರ್ಲಿ, ಜೋತೆಯಿದ್ದರು.