December 22, 2024
IMG-20241208-WA0061

ಬೆಳ್ತಂಗಡಿಯ ಅಮಾಯಕ ಮುಸ್ಲಿಂ ಯುವಕನ ಮೇಲೆ NIA ಮತ್ತು ಪೋಲಿಸ್ ದೌರ್ಜನ್ಯ :ನ್ಯಾಯಾಂಗ ತನಿಖೆ ನಡೆಯಲಿ: ಎಸ್‌ಡಿಪಿಐ ಒತ್ತಾಯ

ಮಂಗಳೂರು: ಎರಡು ವರ್ಷಗಳ ಹಿಂದಿನ ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ತನಿಖೆಯ ನೆಪದಲ್ಲಿ NIA ಆರೋಪಿ ಎಂದು ಹೆಸರಿಸಲ್ಪಟ್ಟವನೊಬ್ಬನ ದೂರದ ಸಂಬಂದಿಯಾದ ಸುಹೈಲ್ ಎಂಬವರಿಗೆ ಬೆಳ್ತಂಗಡಿ ಪೋಲಿಸ್ ಮತ್ತು NIA ಅಧಿಕಾರಿಗಳು ತಮ್ಮ ವಾಹನದಲ್ಲಿ ದೌರ್ಜನ್ಯ ನಡೆಸಿ ಕ್ರೌರ್ಯ ಮೆರೆದ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಎರಡು ವರ್ಷಗಳ ಹಿಂದೆ ಮಸೂದ್,ಪ್ರವೀಣ್ ನೆಟ್ಟಾರ್,ಜಲೀಲ್ ಹಾಗೂ ಫಾಝಿಲ್ ಹತ್ಯೆ ನಡೆದಿತ್ತು. ಅದರಲ್ಲಿ ಅಂದಿನ ಬಿಜೆಪಿ ಸರ್ಕಾರ ಮೂರು ಮುಸ್ಲಿಂ ಯುವಕರ ಹತ್ಯೆ ಪ್ರಕರಣವನ್ನು ಗಣನೆಗೆ ತೆಗೆಯದೆ ಪ್ರವೀಣ್ ನೆಟ್ಟಾರ್ ಕೇಸ್ ನ್ನು ಮಾತ್ರ NIA ಗೆ ವಹಿಸಿತ್ತು.
ಅದರ ನಂತರ NIA ಹಲವಾರು ಮುಸ್ಲಿಂ ಯುವಕರ ಮನೆಗೆ ದಾಳಿ ನಡೆಸಿತ್ತು ಹಾಗೂ ನೂರಾರು ಮುಸ್ಲಿಂ ಯುವಕರನ್ನು ವಿಚಾರಣೆಗೆ ಒಳಪಡಿಸಿ 23 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ 19 ಮಂದಿಯನ್ನು ಜೈಲಿಗಟ್ಟಿತ್ತು.ಇದರ ಹೊರತಾಗಿಯೂ ಈಗ ನಾಪತ್ತೆಯಾಗಿರುವವರ ಪತ್ತೆಯ ಹೆಸರಿನಲ್ಲಿ ಮುಸ್ಲಿಮರ ಮನೆಯ ಮೇಲೆ ದಾಳಿ ಮಾಡಿ ಶೋ‌ ಮಾಡಲು ಹೊರಟಿದೆ.
ಈ ಒಂದು ಉತ್ಸಾಹ ಉಳಿದ ಮೂವರು ಮುಸ್ಲಿಂ ಯುವಕರ ಹತ್ಯೆ ಕೇಸ್ ನಲ್ಲಿ ಯಾಕಿಲ್ಲ?
ತನಿಖಾ ಏಜೆನ್ಸಿಗಳು ಬಿಜೆಪಿಯ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಾ ಇದೆ.


ಸದ್ರೀ ಪ್ರಕರಣವನ್ನು ಎಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ ಎಂಬ ಮಾಹಿತಿ ವಾರ್ತೆಗಳಲ್ಲಿ ಬರುತ್ತಾ ಇದೆ. ಆದರೆ NIA ಎಂಬುದು ಪೋಲಿಸ್ ಇಲಾಖೆಯ ಮೇಲ್ ಹಂತದಲ್ಲಿರುವ ತನಿಖಾ ಸಂಸ್ಥೆ. ಹಾಗಾಗಿ ಪೋಲಿಸ್ ಇಲಾಖೆ NIA ಅಧಿಕಾರಿಗಳನ್ನು ವಿಚಾರಣೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬುದು ತರ್ಕ ಬದ್ದವಲ್ಲ.ಹಾಗಾಗಿ ಈ ಪ್ರಕರಣವನ್ನು ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ

Leave a Reply

Your email address will not be published. Required fields are marked *