

ಶ್ರೀನಗರ: ʻಆಪರೇಷನ್ ಸಿಂಧೂರʼಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತದ 24 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ಗುರುವಾರ ಪಾಕಿಸ್ತಾನ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸುತ್ತಿದ್ದಂತೆಯೇ ಭಾರತವು ಕೂಡ ಲಾಹೋರ್, ಇಸ್ಲಾಮಾಬಾದ್ ಮೇಲೆ ದಾಳಿ ಆರಂಭಿಸಿದೆ. ಹೀಗಾಗಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಕ್ಷಿಪಣಿಗಳನ್ನು ಬಳಸಿಕೊಂಡು ಹಮಾಸ್ ಸ್ಟೈಲ್‌ನಲ್ಲಿ ಪಾಕ್ ಆರ್ಮಿ ಜಮ್ಮು, ಪಂಜಾಬ್ ಹಾಗೂ ರಾಜಸ್ಥಾನದ ಕೆಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಟ್ಯಾಕ್ ಮಾಡಿದೆ. ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿ, ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ.
ಯಾವೆಲ್ಲ ಏರ್‌ಪೋರ್ಟ್‌ಗಳು ಬಂದ್?
ಶ್ರೀನಗರ
ಅಮೃತಸರ
ಲುಧಿಯಾನ
ಭುಂಟರ್
ಕಿಶೆನ್‌ಗಢ
ಪಟಿಯಾಲ
ಶಿಮ್ಲಾ
ಕಾಂಗ್ರಾ-ಗಗ್ಗಲ್
ಭಟಿಂಡಾ
ಜೈಸಲ್ಮೇರ್
ಜೋಧಪುರ
ಬಿಕಾನೆರ್
ಹಲ್ವಾರಾ
ಪಠಾಣ್‌ಕೋಟ್
ಜಮ್ಮು
ಲೆಹ್
ಮುಂದ್ರಾ
ಜಾಮ್‌ನಗರ್
ಹಿರಾಸರ್ (ರಾಜ್‌ಕೋಟ್)
ಪೋರಬಂದರ್
ಕೆಶೋಡ್
ಕಾಂಡ್ಲಾ
ಭುಜ್