May 8, 2025

ಕರ್ನಾಟಕ: ನೈಜ ಸಬಲೀಕರಣ ಮಹಿಳಾ ರಾಜಕೀಯ ಪ್ರಾತಿನಿಧ್ಯದಲ್ಲಿದೆ ಎಂಬ ಘೋಷಣೆಯೊಂದಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ವಿವಿಧ ಜಿಲ್ಲೆಗಳಲ್ಲಿ ವಿಚಾರಗೋಷ್ಠಿ, ಮಹಿಳೆಯರಿಗೆ ಸ್ಪರ್ಧೆಗಳು, ಇಫ್ತಾರ್ ಕಾರ್ಯಕ್ರಮ, ಮಹಿಳಾ ರಾಜಕೀಯ ಪ್ರಾತಿನಿಧ್ಯದ ತರಗತಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಗ್ಗೆ ತರಗತಿ, ಏಡ್ಸ್ ಸಂಸ್ಥೆಗಳಿಗೆ ಭೇಟಿ ನೀಡಿ ಒಂದು ತಿಂಗಳ ಉಚಿತ ಔಷಧಿ ವಿತರಣೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸ್ಕೀಮ್ ಗಳ ಬಗ್ಗೆ ಮಾಹಿತಿ ನೀಡುವುದು ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ.


ಗಣರಾಜ್ಯೋತ್ಸವದ ಪ್ರಯುಕ್ತ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕವು ಹಮ್ಮಿಕೊಂಡಿದ್ದ “ನಮ್ಮ ದೇಶದ ಅಡಿಪಾಯವನ್ನು ಬಲಪಡಿಸೋಣ” ಎಂಬ ವಿಷಯದಲ್ಲಿ ಪಿ.ಯು.ಸಿ. ಹಾಗೂ ಪದವಿ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನವನ್ನು ವಿತರಿಸಲಾಯಿತು..
ಇದರಲ್ಲಿ ರಾಜ್ಯ ನಾಯಕಿಯರು, ಜಿಲ್ಲಾ ನಾಯಕಿಯರು , ಅಸೆಂಬ್ಲಿ ನಾಯಕಿಯರು ಹಾಗೂ ತಳಮಟ್ಟದ ನಾಯಕಿಯರು, ಸದಸ್ಯೆಯರು, ಹಿತೈಷಿಗಳು ಮತ್ತು ಸಾರ್ವಜನಿಕರು ಭಾಗವಹಿಸಿರುತ್ತಾರೆ.