December 22, 2024
IMG-20240810-WA0019

ಯುಎಸ್​​​ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ, ಎಕ್ಸ್​​ನಲ್ಲಿ ಟ್ವೀಟ್​​​ವೊಂದನ್ನು ಹಂಚಿಕೊಂಡಿದೆ. Something big soon India (ಸದ್ಯದಲ್ಲಿಯೇ ಭಾರತದಲ್ಲಿ ಮತ್ತೊಂದು ದೊಡ್ಡದು ನಡೆಯಲಿದೆ) ಎಂಬ ಸೂಚನೆಯೊಂದನ್ನು ನೀಡಿದೆ. ಇನ್ನು ಈ ಟ್ವೀಟ್​​ ಎಲ್ಲ ಕಡೆ ಭಾರೀ ವೈರಲ್​ ಆಗುತ್ತಿದ್ದು, ಚರ್ಚೆ ಕೂಡ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಟ್ರೆಂಡ್​ ಆಗುತ್ತಿದೆ. ಹಿಂಡೆನ್‌ಬರ್ಗ್ ಈ ಹಿಂದೆ ಭಾರತ ಮೇಲೆ ಇಂತಹ ಸಂಶೋಧನೆಯನ್ನು ಮಾಡಿ ಕೈಸುಟ್ಟುಕೊಂಡಿತ್ತು. ಇದೀಗ ಮತ್ತೆ ಭಾರತಕ್ಕೆ ಏನೋ ಕಾದಿದೆ ಎಂಬಂತೆ ಪೋಸ್ಟ್​​​ ಮಾಡಿದೆ.

ಈ ಹಿಂದೆ ಭಾರತದ ಅದಾನಿ ಗ್ರೂಪ್​​ ಕಂಪನಿಯನ್ನು ಟಾರ್ಗೆಟ್​​​ ಮಾಡಿ ಒಂದು ಸಂಶೋಧನೆಯ ವರದಿಯನ್ನು ನೀಡಿತ್ತು. ಈ ಬಗ್ಗೆ ಸಂಸತ್​​​​ ಸಭೆಯಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಮಾನನಷ್ಟ ಮೊಕದ್ದಮೆಯ ನಂತರ ಈ ಸಂಸ್ಥೆ ಮೌನವಾಗಿತ್ತು. ಇದೀಗ ಮತ್ತೆ ಏನೋ ದೊಡ್ಡ ಮಟ್ಟದಲ್ಲಿ ಭಾರತಕ್ಕೆ ಕಾದಿದೆ ಎಂಬುಂತೆ ಎಕ್ಸ್​​ನಲ್ಲಿ ಪೋಸ್ಟ್​​ ಮಾಡಿದೆ.

ಹಿಂಡೆನ್‌ಬರ್ಗ್ ಅದಾನಿ ಗ್ರೂಪ್‌ನ ವಿರುದ್ಧದ ಆರೋಪ ಮಾಡಿದ ನಂತರ ಅದಾನಿ ಗ್ರೂಪ್ ಸ್ಟಾಕ್ ಬೆಲೆಗಳಲ್ಲಿ ಗಮನಾರ್ಹ ಕುಸಿತ ಕಂಡಿತ್ತು. ಈ ಆರೋಪ $ 100 ಶತಕೋಟಿ ನಷ್ಟಕ್ಕೆ ಕಾರಣವಾಯಿತು. ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಿದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ. ಆಧಾರರಹಿತವಾದ ಆರೋಪಗಳನ್ನು ಮಾಡಲಾಗಿದೆ ಎಂದು ಗೌತಮ್​​ ಅದಾನಿ ಹೇಳಿದರು.

Leave a Reply

Your email address will not be published. Required fields are marked *