‘ಸಂಸ್ಕಾರದ ಜೊತೆಗೆ ಜ್ಞಾನವು ದೊರೆತರೆ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ, ಪೋಷಕರು ತಮ್ಮ ಜವಾಬ್ದಾರಿಯನ್ನು ಮಕ್ಕಳಿಗೆ ಅರಿವು ಮೂಡಿಸಬೇಕು’ ಎಂದು ದ.ಕ ಮದರಸ ಮೆನೆಜಮೆಂಟ್ ಅಧ್ಯಕ್ಷರಾದ ಹಾಜಿ ಎಂ ಹೆಚ್ ಮೊಯಿದ್ದಿನಬ್ಬ ಇಂದು ನಡೆದ ತೌಹೀದ್ ಅಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಭೆಯ ಆಡಳಿತ ಮಂಡಳಿಯ ಸಭೆಯಲ್ಲಿ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಯು ಹೆಚ್ ಖಾಲೀದ್ ‘ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ಸಾಮರಸ್ಯವನ್ನು ಮೈಗೂಡಿಸಿಕೊಳ್ಳಬೇಕೆಂದು, ಹಿತ ವಚನ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ರಿಯಾಜ್ ಹುಸೈನ್ ರವರ ನೇತೃತ್ವದಲ್ಲಿ ಜರುಗಿತು.
2023-2024 ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು ಜೊತೆಗೆ ಶಿಕ್ಷಕರನ್ನು ಅಭಿನಂದಿಸಲಾಯಿತು.
ಶಾಲಾ ಮುಖ್ಯಶಿಕ್ಷಕರಾದ ಇಬ್ರಾಹಿಂ ಸಲೀಂ ಪಿ ಶಾಲೆಯ ನಿಯಮ ನಿಬಂಧನೆಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿದರು. ಶಿಕ್ಷಕ ರಕ್ಷಕ ಕಾರ್ಯದರ್ಶಿ ಅಸ್ಮಾ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷರಾದ ಹಾಜಿ ಬಿ ಎಚ್ ಅಬ್ದುಲ್ ಖಾದರ್, ಶಾಲಾ ಸಂಚಾಲಕರಾದ ಹಾಜಿ ಮೊಹಮ್ಮದ್ ಅಬ್ದುಲ್ ರೆಹಿಮಾನ್, ಬಂಟ್ವಾಳ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಹ್ಮದ್ ಶಾಫಿ, ಕಾರ್ಯದರ್ಶಿ ಫಾರೂಕ್ ಎ ಆರ್, ಶಾಲಾ ಆಡಳಿತ ಮಂಡಳಿಯ ಖಜಾಂಚಿ ಜಿ. ಎಂ ಇಮ್ರಾನ್ ಹಾಗೂ ಸದಸ್ಯರಾದ ಉಬೈದುಲ್ಲಾ, ಹಾರೂನ್ ರಶೀದ್, ಸನಾವುಲ್ಲಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹನೀಫ್, ಕೋಶಾಧಿಕಾರಿ ಮೊಹಮ್ಮದ್ ಮುಸ್ತಫ ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾಸ್ಟರ್ ಕಾರ್ಯಕ್ರಮವನ್ನು ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ರಚನ ವಂದಿಸಿದರು ಮತ್ತು ಸಹಶಿಕ್ಷಕಿಯಾದ ಶ್ರೀಮತಿ ನಿಶ್ಮಿತಾ ಹಾಗು ಡ್ಯಾಪ್ನಿ ಸ್ವೀಕಾರ ಕಾರ್ಯಕ್ರಮ ನಿರೂಪಿಸಿದರು.