August 4, 2025
IMG-20250611-WA0004

ಉಪ್ಪಿನಂಗಡಿ: ಕರ್ನಾಟಕ ಕಬಡ್ಡಿ ತಂಡಕ್ಕೆ ಕೊಯಿಲದ ನಿವಾಸಿ ಝಮೀರ್ ಆಯ್ಕೆಯಾಗಿದ್ದು, 2 ದಿನಗಳ ಹಿಂದೆ ಆಂಧ್ರಪ್ರದೇಶದ ಮಚಲೀಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಬೀಚ್ ಕಬಡ್ಡಿಯಲ್ಲಿ ಆಟವಾಡಿ ಉತ್ತಮ ಪ್ರದರ್ಶನ ತೋರಿದ್ದಾರೆ.

ಝಮೀರ್ ಅವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ದ್ವಿತೀಯ ವರ್ಷದ ಬಿ.ಎ. ತರಗತಿ ವಿದ್ಯಾರ್ಥಿ ಯಾಗಿರುತ್ತಾರೆ. ಝಮೀರ್ ಪ್ರಾಥಮಿಕ ಶಿಕ್ಷಣವನ್ನು ಆತೂರು ಬದ್ರಿಯಾ ಸ್ಕೂಲ್, ಪ್ರೌಢ ಶಿಕ್ಷಣವನ್ನು ಕಡಬದ ಜೋಕಿಂ ಪ್ರೌಢ ಶಾಲೆಯಲ್ಲಿ, ದ್ವಿತೀಯ ಪಿಯುಸಿಯನ್ನು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಮಾಡಿದ್ದರು. ಝಮೀರ್ ಕೊೈಲ ನಿವಾಸಿ ಝಕರಿಯಾ ನೇರೆಂಕಿ ಮತ್ತು ತಾಹಿರಾ ಬಾನು ದಂಪತಿಯ ಪುತ್ರ.