July 12, 2025
rupani1_647_080516062706

ಅಹಮದಾಬಾದ್‌: ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿ ಗುಜರಾತಿನ ಮಾಜಿ ಸಿಎಂ ವಿಜಯ್‌ ರೂಪಾನಿ ಪ್ರಯಾಣಿಸುತ್ತಿದ್ದರು.

ಪತನಗೊಂಡ ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. ಈಗಾಗಲೇ ಸ್ಥಳಕ್ಕೆ ಅಂಬುಲೆನ್ಸ್‌ ಮತ್ತು ಅಗ್ನಿಶಾಮಕ ದಳ ಧಾವಿಸಿವೆ.

ಟೇಕಾಫ್‌ ಆದ ಕೆಲವೇ ನಿಮಿಷದಲ್ಲಿ ಲಂಡನ್‌ಗೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾನ ಪತನಗೊಂಡಿದೆ. ವಿಮಾನ ಮಧ್ಯಾಹ್ನಅಹಮದಾಬಾದ್‌ನಿಂದ ಟೇಕಾಫ್‌ ಆಗಿತ್ತು. ಟೇಕಾಫ್‌ ಆದ 10 ನಿಮಿಷದಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡು ಜನವಸತಿ ಕಟ್ಟಡದ ಮೇಲೆ ಬಿದ್ದಿದೆ.