December 23, 2024
IMG-20240812-WA0034


ಬಂಟ್ವಾಳ: ಬೆರಳೆಣಿಕೆಯ ಮುಸ್ಲಿಂ ಮನೆಗಳಿರುವ ಬಂಟ್ವಾಳ ತಾಲೂಕಿನ ಕರಿಯಂಗಳದ ಮುಸ್ಲಿಂ ಯುವಕ ತಶ್ರೀಫ್ ಎಂಬವನ ಮೇಲೆ ಹಿಂದೂ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆಂದು ಅದೇ ಪರಿಸರದ ಕೆಲವೊಂದು ಕೋಮುವಾದಿಗಳು ಸುಳ್ಳು ಕೇಸು ದಾಖಲಿಸಿದ್ದು, ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದ ಗಳಿಂದ ತೇಜೋವದೆ ನಡೆಸಿದ್ದಾರೆ.


ಈ ಬಗ್ಗೆ ಸತ್ಯ ಪ್ರಮಾಣ ಮಾಡಲು ಯುವಕನ ಕುಟುಂಬಸ್ಥರು ಧಾರ್ಮಿಕ ಕ್ಷೇತ್ರ ಗಳಾದ ಪೊಳಲಿ ಮಸೀದಿ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬರಲು ಅಹ್ವಾನ ನೀಡಿದ್ದಾರೆ. ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರ ಕೋರಗಜ್ಜನ ಕ್ಷೇತ್ರಕ್ಕೂ ಬರಲು ನಾವು ತಯಾರಿದ್ದೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ನಡೆದದ್ದೇನು?
ದಿನಾಂಕ 03/08/2024 ರಂದು ಸಂಜೆ 06 ಗಂಟೆಗೆ ನೆರೆಯ ರಾಮ ಮೂಲ್ಯ ಎಂಬವರ ಪುತ್ರ ಪದ್ಮನಾಭ ಎಂಬಾತ ಕರಿಯಂಗಳ ಮಸೀದಿ ಅಧ್ಯಕ್ಷರಾದ ಉಸ್ಮಾನ್ ರವರ ಮನೆಯ ಅಂಗಳಕ್ಕೆ ಬಂದು ಅವಾಚ್ಯ ಶಬ್ದ ಗಳಿಂದ ಬೈದು, ಕೊಡಲಿಯಿಂದ ಹಲ್ಲೆಗೆ ಯತ್ನಿಸಿರುತ್ತಾನೆ, ನಂತರ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ನಂತರ ಉಸ್ಮಾನ್ ರವರು ಬಂಟ್ವಾಳ ಠಾಣೆಗೆ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಈ ಘಟನೆ ನಂತರ ಪದ್ಮನಾಭ ಎಂಬ ಆರೋಪಿ ಉಸ್ಮಾನ್ ರವರ ಮಗ ತಸ್ರಿಫ್ ನ ಮೇಲೆ ಮಹಿಳೆಗೆ ಹಲ್ಲೆ ನಡೆಸಿದ್ದಾನೆ ಹಾಗೂ ಮೈ ಗೆ ಕೈ ಹಾಕಿದ್ದಾನೆ ಎಂದು ಸುಳ್ಳು ಕೇಸು ದಾಖಲಿಸಿದಲ್ಲದೆ ಸಾಮಾಜಿಕ ಜಾಲತಾಣ ದಲ್ಲಿ ಧರ್ಮದ ಅವಹೇಳನ ಮತ್ತು ತಸ್ರಿಫ್ ನ ತೇಜೋವದೆ ನಡೆಸಿರುತ್ತಾನೆ. ಈ ಕುಟುಂಬವು ಸುಳ್ಳು ಕೇಸಿನಿಂದ ಮಾನಸಿಕವಾಗಿ ಜರ್ಜರಿತವಾಗಿದ್ದು ನಿಂದನೆ ಅನುಭವಿಸಿದ್ದಾರೆ.


ಇದುವರೆಗೂ ಯಾವುದೇ ಅಪರಾಧ ಮಾಡದ ಅಮಾಯಕನನ್ನು ಕುತಂತ್ರದ ಮೂಲಕ ಸಿಲುಕಿಸಿ ಕುಟುಂಬದ ಮಾನಸಿಕ ನೆಮ್ಮದಿಗೆ ಕೊಳ್ಳಿ ಇಟ್ಟ ಕೋಮುವಾದಿಗಳಿಗೆ ತಕ್ಕ ಶಿಕ್ಷೆ ಯಾಗಲಿ ಹಾಗೂ ಕುತಂತ್ರದ ಮೂಲಕ ಸಿಲುಕಿಸಿ ಅಮಾಯಕನನ್ನು ಬಂದಿಸುವಲ್ಲಿ ಸಫಲರಾಗಿದ್ದಾರೆ. ಮಾತ್ರವಲ್ಲದೆ ಕೊಲೆ ಬೆದರಿಕೆ ಹಾಕಿದ ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದರೂ ರಾಜಾರೋಷವಾಗಿ ತಿರುಗಾಡುತ್ತಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಕೇಸಿನ ಸತ್ಯ ಪ್ರಮಾಣಕ್ಕಾಗಿ ಸ್ಥಳೀಯ ಧಾರ್ಮಿಕ ಕ್ಷೇತ್ರ ಗಳಾದ ಪೊಳಲಿ ಮಸೀದಿ, ದೇವಸ್ಥಾನ, ಹಾಗೂ ಕೊರಗಜ್ಜನ ಕ್ಷೇತ್ರ ಕ್ಕೆ ಅಹ್ವಾನ ನೀಡಿರುತ್ತಾರೆ.ಮತ್ತು ಸತ್ಯ ಪ್ರಮಾಣಕ್ಕೆ ಸಿದ್ದ ರಿದ್ದೇವೆ ಎಂದಿದ್ದಾರೆ.


ಈ ದ್ವೇಷ ಕ್ಕೆ ಕಾರಣ ವೇನು?
ಸುಮಾರು ತಿಂಗಳ ಮುಂಚೆ ಇದೇ ಪದ್ಮನಾಭನ ತಮ್ಮ ಶಿವಾನಂದ ಮತ್ತಿತರು ಸೇರಿಕೊಂಡು ಕೃಷಿಕರಾದ ಉಸ್ಮಾನ್ ರವರು ತಮ್ಮ ಉಳುಮೆಯ ಕೋಣ ವನ್ನು ಮೇಯಿಸೋಕೆ ತರುವಾಗ ಅಡ್ಡಗಟ್ಟಿ ಹಲ್ಲೆ ನಡೆಸಿರುತ್ತಾರೆ , ಈ ಕೇಸು ಈಗಾಗಲೇ ಬಂಟ್ವಾಳ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ದ್ವೇಷ ಕ್ಕೆ ಉಸ್ಮಾನ್ ರವರ ಮಗನ ಮೇಲೆ ಸುಳ್ಳು ಕೇಸು ದಾಖಲಿಸಿ ತೇಜೋವದೆ ನಡೆಸುವ ಪ್ರಯತ್ನ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಉಸ್ಮಾನ್ ರವರ ಮಗ ತಸ್ರಿಫ್ ಮೇಲೆ ಇವರು ನೀಡಿರುವ ಸುಳ್ಳು ಕೇಸಿನ ಸತ್ಯಾಸತ್ಯತೆ ಬಯಲು ಗೊಳಿಸಲು ಸತ್ಯ ಪ್ರಮಾಣಕ್ಕೆ ಬರಲು ಈ ಕುಟುಂಬವು ಸಿದ್ದ ವಿದೆ ಹಾಗೂ ನ್ಯಾಯಕ್ಕಾಗಿ ಅಗ್ರಹಿಸುತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *