
ಬೆಂಗಳೂರು: SDPI ರಾಷ್ಟ್ರೀಯ ಅಧ್ಯಕ್ಷ ಎಂ ಕೆ ಫೈಝಿ ಅವರನ್ನು ED ಅಕ್ರಮ ಬಂಧನ ಮಾಡಿದ್ದು, ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ದಿನಾಂಕ ರಾಷ್ಟ್ರಾದ್ಯಂತ ಏಕದಿನದ ಪ್ರತಿಭಟನೆಯನ್ನು ನಡೆಸಲಾಯಿತು.

ಇದರ ಭಾಗವಾಗಿ ಕರ್ನಾಟಕ ರಾಜ್ಯಾದ್ಯಂತ ಮನೆ ಮನೆಗಳಿಂದ ಜಾತಿ, ಮತ ,ಭೇದವಿಲ್ಲದೆ ತನಿಖಾ ಸಂಸ್ಥೆಯ ಅಕ್ರಮದ ವಿರುದ್ಧ ಬಿತ್ತಿ ಪತ್ರ ಪ್ರದರ್ಶಿಸುವುದರ ಮೂಲಕ ಹಾಗೂ ಘೋಷಣೆಗಳನ್ನು ಹೋಗುವುದರ ಮೂಲಕ ವಿರೋಧವನ್ನು ವ್ಯಕ್ತಪಡಿಸಲಾಯಿತು.
ಈ ಒಂದು ದಿನದ ಹೋರಾಟದಲ್ಲಿ WIM ನ ರಾಜ್ಯ ನಾಯಕಿಯರು, ಜಿಲ್ಲಾ ಮತ್ತು ಅಸೆಂಬ್ಲಿ ಮಟ್ಟದ ನಾಯಕಿಯರು ಕಾರ್ಯಕರ್ತರನ್ನೊಳಗೊಂಡಂತೆ ಹಲವಾರು ಹಿತೈಷಿಗಳು ಭಾಗವಹಿಸಿರುತ್ತಾರೆ. ಇದಲ್ಲದೆ ಅನೇಕ ಪುರುಷರು, ಸಾಮಾಜಿಕ ಹೋರಾಟಗಾರರು, ಹೋರಾಟಗಾರ್ತಿಯರು, ಪ್ರಗತಿಪರ ಹೋರಾಟಗಾರರು, ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿ ಸೇಡಿನ ರಾಜಕೀಯ ನಿಲ್ಲಿಸಿ MK ಫೈಝಿಯನ್ನು ಬಿಡುಗಡೆಗೊಳಿಸಿ, ED ಯ ಸರಪಳಿ ಬಿಜೆಪಿಯ ಹೇಡಿತನದ ಕೈಗನ್ನಡಿ, ಬಿಜೆಪಿ ಯ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತೋಣ ಎಂಬಿತ್ಯಾದಿ ವಿಷಯಗಳನ್ನೊಳಗೊಂಡ ಬಿತ್ತಿ ಪತ್ರ ಪ್ರದರ್ಶಿಸಿದರು.