December 22, 2024
IMG-20241112-WA0033

ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ಮುಸ್ಲಿಮರ ಒಗ್ಗೂಡುವಿಕೆಯ ಯುವ ಸಂಘಟನೆಯಾಗಿದೆ MMYC (R) ಬೆಂಗಳೂರು.ಇದರ ವತಿಯಿಂದ ಕುಟುಂಬ ಸಮ್ಮಿಲನ ಹಾಗೂ ಕ್ರೀಡಾಕೂಟ ಇತ್ತೀಚೆಗೆ ಬೆಂಗಳೂರಿನ ದೇವನಹಳ್ಳಿ ಸಮೀಪ ಕುಂದಾಣ ಅಜ್ಜಿ ತೋಟ ಫಾರ್ಮ್ ಹೌಸ್ ನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.. ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡ ಕಾರ್ಯಕ್ರಮ ರಾತ್ರಿ ಎಂಟು ಗಂಟೆವರೆಗೆ ನಡೆಯಿತು.. ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಮಕ್ಕಳು ಸೇರಿದಂತೆ ಒಟ್ಟು 225 ಮಂದಿ ಭಾಗವಹಿಸಿದ್ದರು.


ಯುವಕರಿಗೆ ಕ್ರಿಕೆಟ್ ಹಗ್ಗ ಜಗ್ಗಾಟ ಕಬಡ್ಡಿ ಗೋಣಿ ಚೀಲ ಓಟ, ಸಂಗೀತ ಕುರ್ಚಿ, ಹಾಡುಗಾರಿಕೆ,ಹಗ್ಗ ಜಗ್ಗಾಟ ಸಹಿತ ಹಲವು ಕ್ರೀಡೆಗಳು ಬೇರೆ ಬೇರೆ ವಿಭಾಗಗಳಲ್ಲಿ ನಡೆದು ಸದಸ್ಯರ ಮನದಲ್ಲಿ ಅಚ್ಚಳಿಯದೆ ಉಳಿದ ಸಂದರ್ಭ ಇದಾಗಿದೆ. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಉಮ್ಮರ್ ಹಾಜಿ, ಹಾಲಿ ಅಧ್ಯಕ್ಷರಾದ ಅಬೂಬಕ್ಕರ್ ಜಯನಗರ (ಅಬ್ಬು) ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಜಯನಗರ,ವಾಹಿದ್ ಖಾರ್ಯಖಾನ್ , ವಕೀಲರಾದ ಅಬ್ದುಲ್ ಲತೀಫ್ ಬಡಗನ್ನೂರು ಬೆಂಗಳೂರು, ಪ್ರಮುಖರಾದ ಬಶೀರ್ ಪುಣಚಾ, ಸಮದ್ ಸೊಂಪಾಡಿ,ಹಬೀಬ್ ನಾಳ, ನಿರ್ದೇಶಕರಾದ ಉಮ್ಮರ್ ಕುಂಞಿ ಸಾಲೆತ್ತೂರು,ಅಬ್ಬಾಸ್ ಸಿಪಿ ಸಹಿತ ಹಲವರು ಭಾಗವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಕ್ಯಾಂಪ್ ನಡೆಯಿತು.ಸದಸ್ಯರು ಇದರ ಸದುಪಯೋಗ ಪಡಿಸಿಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಅಖಿಲ್ ಪುತ್ತೂರು, ಸಾಜಿದ್ ನಿರ್ವಹಿಸಿದರು.ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರ ಸಮ್ಮುಖದಲ್ಲಿ ಉಪಾಧ್ಯಕ್ಷರಾದ ವಾಹಿದ್ ಖಾರ್ಯಖಾನ್, ಸಂಸ್ಥೆಯ ಅಂಬುಲೆನ್ಸ್ ಡ್ರೈವರ್ ಸಿರಾಜುದ್ದೀನ್ , ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟ ಅಖಿಲ್ ಪುತ್ತೂರು, ಕಾರ್ಯಕ್ರಮಕ್ಕೆ ಸಹಕರಿಸಿದ ಫೋಟೋಗ್ರಾಫರ್ ಇರ್ಷಾದ್ ದೇರಳಕಟ್ಟೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ ಫಲಕ ನೀಡಿ ಗೌರವಿಸಲಾಯಿತು..
ಮುಂದಿನ 2025 ಫೆಬ್ರವರಿಯಲ್ಲಿ MMYC ಸಾರಥ್ಯದಲ್ಲಿ ಗಣ್ಯರ ಕೂಡುವಿಕೆಯೊಂದಿಗೆ ಬೆಂಗಳೂರಿನಲ್ಲಿ ವಿಶ್ವ ಬ್ಯಾರಿ ಸಮ್ಮೇಳನ ನಡೆಸುವ ಬಗ್ಗೆ ಘೋಷಣೆ ಮಾಡಲಾಯಿತು
ಪ್ರಮುಖರಾದ ಜುನೈದ್ ಪಿಕೆ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *