April 28, 2025
Picsart_24-11-13_15-00-53-966

{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ಬಂಟ್ವಾಳ: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕದ ಜನರಿಗೆ ಧೂಳಿನ ಭಾಗ್ಯ ನೀಡಲಾಗಿದೆ. ಮಳೆ ಬಂದು ಹೋದರು ಧೂಳಿನಿಂದ ಕಲ್ಲಡ್ಕ ಜನತೆಗೆ ನೆಮ್ಮದಿ ಇಲ್ಲದಂತಾಗಿದೆ ಎಂಬ ವರದಿಯನ್ನು ನ್ಯೂಸ್ 7 ಸುದ್ದಿ ಬಿತ್ತರಿಸಿತ್ತು. ಅದರ ಬೆನ್ನಲ್ಲೇ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.


ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಸಂಚಾರಕ್ಕೆ ಪರ್ಯಾಯ ರಸ್ತೆ ಮಾಡದಿರುವುದರಿಂದ ದಯನೀಯ ಸ್ಥಿತಿ ಎದುರಾಗಿತ್ತು. ರಸ್ತೆಯ ಮಧ್ಯೆ ಹೊಂಡ ಬಿದ್ದಿರುವುದರಿಂದ ಅಲ್ಲಿ ಸಾಗುವುದೇ ದುಸ್ತರವಾಗಿತ್ತು.

ರಸ್ತೆ ಕಾಮಗಾರಿ ಇನ್ನೂ ಸಂಪೂರ್ಣವಾಗದೆ ಅತ್ತ ಕಡೆ ಸರ್ವೀಸ್ ರಸ್ತೆಯು ಹೊಂಡಗಳಿಂದ ಸಂಪೂರ್ಣವಾಗಿ ಹದಗೆಟ್ಟಿತ್ತು. ಇದನ್ನು ನ್ಯೂಸ್ 7 ವರದಿ ಮಾಡಿತ್ತು.