ಬಂಟ್ವಾಳ :78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಗೂಡಿನಬಳಿ ಹಯಾತುಲ್ ಇಸ್ಲಾಂ ಪ್ರಾಥಮಿಕ ಶಾಲೆ ವತಿಯಿಂದ ಅದ್ದೂರಿಯಾಗಿ ಧ್ವಜಾರೋಹಣ ನೆರವೇರಿತು.
ಧ್ವಜಾರೋಹನವನ್ನು ಶಾಲೆಯ ಸಂಚಾಲಕರಾದ ಜಿ.ಕೆ ಅಬ್ದುಲ್ ರಶೀದ್ ಹಾಗೂ ಮಸ್ಜಿದ್ ಎ ಮುತ್ತಲಿಬ್ ಗೂಡಿನಬಳಿ ಇದರ ಅಧ್ಯಕ್ಷರಾದ ಉಬೈದುಲ್ಲಾ ಹಾಜಿ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ
ಮಸ್ಜಿದ್ ಎ ಮುತ್ತಲಿಬ್ ಗೂಡಿನಬಳಿ ಇದರ ಖತೀಬ್ ರಾದ ಅಶ್ರಫ್ ಫೈಝೀ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವತಂತ್ರ ಹೋರಾಟಗಾರರನ್ನು ಸ್ಮರಿಸಿದರು.
ಬಳಿಕ ಮಾತಾಡಿದ ಇಂಗ್ಲಿಷ್ ಮಾಧ್ಯಮ ಶಾಲೆಯ ಸಂಚಾಲಕರಾದ ಐ. ಎಂ. ಆರ್ ಇಕ್ಬಾಲ್ ‘ ನಮ್ಮ ಹಿರಿಯರು ಮಾಡಿದ ಹೋರಾಟದಿಂದ ನಮಗೆ ಇವತ್ತು ಸ್ವಾತಂತ್ರ ಲಭಿಸಿದೆ’ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಯಾತುಲ್ ಇಸ್ಲಾಂ ಸಂಘದ ಅಧ್ಯಕ್ಷರಾದ ಜಿ. ಎಂ. ಅನ್ವರ್ ಹುಸೈನ್, ಉಪಾಧ್ಯಕ್ಷರಾದ ಎಂ. ವೈ ರಫೀಕ್, ಜಿ.ಕೆ ಮನ್ಸೂರ್,ಸದರ್ ಉಸ್ತಾದ್ ಖಾದರ್ ಮದನಿ,ಶಾಲೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಂ. ಕೆ. ಹನೀಫ್, ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಲಿಝಿ,ಶಾಲೆ ಮದರಸದ ಸದರ್ ಉಸ್ತಾದ್ ರಾದ ಶಹುಲ್ ಹಮೀದ್ ಉಪಸ್ಥಿತರಿದ್ದರು.
ಹಯಾತುಲ್ ಇಸ್ಲಾಂ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾದ ಖತೀಜ ನಶತ್ ನಿಝ ಕಾರ್ಯಕ್ರಮವನ್ನು ಸ್ವಾಗತಿಸಿದರು.
ಸಂಜೀವ ಎಂ ಸಹಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರು.