December 22, 2024
IMG-20240815-WA0062

ಹಿದಾಯತುಲ್ ಇಸ್ಲಾಂ ಮದ್ರಸ, ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ವತಿಯಿಂದ ಭಾರತ ದೇಶದ 78 ನೇ ಸ್ವಾತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಬೆಳ್ಳಾರೆ ಪೇಟೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಮುತಅಲ್ಲಿಂಗಳು, ಪೋಷಕರು ಉಸ್ತಾದರು, ಜಮಾಅತ್ ಕಮಿಟಿ ಪದಾಧಿಕಾರಿಗಳು ಒಳಗೊಂಡ ಶಾಂತಿ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.
ನಂತರ ಮುದರ್ರಿಸರಾದ ನಸೀಹ್ ದಾರಿಮಿ
ಮಖಾಂ ಝಿಯಾರತ್ ನೇತೃತ್ವ ನೀಡಿದರು. ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಮಂಗಳ ಧ್ವಜಾರೋಹಣ ನೆರವೇರಿಸಿದರು. ಮದ್ರಸ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಆಲಾಪಿಸಿದರು. ಸದರ್ ಉಸ್ತಾದ್ ಮುಹಮ್ಮದ್ ನವವಿ ಮುಂಡೋಳೆ ಸಂದೇಶ ಭಾಷಣಗೈದರು. SKSBV ಕಾರ್ಯದರ್ಶಿ ಮುಹಮ್ಮದ್ ಕೈಫ್ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಸುಲೈಮಾನ್ ಮುಸ್ಲಿಯಾರ್, ಝೈನುದ್ದೀನ್ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ರಫೀಕ್ ಹನೀಫಿ ,ಝಕರಿಯಾ ಮುಸ್ಲಿಯಾರ್, ಶಾಕಿರ್ ಫೈಝಿ ಬಶೀರ್ ಕಲ್ಲಪ್ಪಣೆ, ನಝೀರ್ ಶೂಬಿಝ್ ,ಅಝ್ಹರುದ್ದೀನ್ ,ಹಮೀದ್ HM ಬಶೀರ್ K.A. ಜಮಾಲ್ KS , ಮುಂತಾದವರು ಉಪಸ್ಥಿತರಿದ್ದರು.SKSBV ಅಧ್ಯಕ್ಷರಾದ ಶಿಹಾಬುದ್ದೀನ್ ಸ್ವಾಗತಿಸಿ ಮೇನೇಜ್ ಮೆಂಟ್ ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

Leave a Reply

Your email address will not be published. Required fields are marked *