December 23, 2024
IMG-20241014-WA0026

ದುಬೈ, ಅಕ್ಟೋಬರ್ 15, 2024 : ಗಡಿನಾಡ ಸಾಹಿತ್ಯ ಸಾಂಸ್ಕøತಕ ಅಕಾಡೆಮಿ (ರಿ) ಯುಎಇ ಘಟಕ, ದುಬೈ ಇದರ ಆಶ್ರಯದಲ್ಲಿ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ ಇದರ ಸಹಯೋಗದಲ್ಲಿ ದುಬೈ ಜೆಮ್ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಭಾನುವಾರ (ಅ 13) ರಾತ್ರಿ ನಡೆದ “ದುಬೈ ಗಡಿನಾಡ ಕನ್ನಡ ಉತ್ಸವ” ಕಾರ್ಯಕ್ರಮದಲ್ಲಿ ನಡೆದ ಅದ್ದೂರಿ ಸಾಂಸ್ಕೃತಿಕ ಕಲರವದಲ್ಲಿ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ದಫ್ ಕಲಾವಿದರನ್ನು ಒಳಗೊಂಡ ‘ಅಲ್ ಫಲಾಹ್ ದಫ್ ಕ್ಲಬ್’ ತಂಡ ಅತ್ಯುತ್ತಮ ದಫ್ ಪ್ರದರ್ಶನ ನೀಡುವ ಮೂಲಕ ಜನರ ಮನಸೂರೆಗೊಂಡರು.


ದುಬೈ ಬೇ ಬೈಟ್ಸ್ ಪ್ರಾಯೋಜಕತ್ವದ ಅಲ್-ಫಲಾಹ್ ದಫ್ ತಂಡವನ್ನು ಮಜೂರ್ ಸಿರಾಜುಲ್ ಹುದಾ ದಫ್ ತಂಡದ ಖಾದರ್ ಮಜೂರ್, ಮುಕ್ಕ ಅಂಜುಮಾನ್ ಸಿರಾಜುಲ್ ಇಸ್ಲಾಂ ದಫ್ ತಂಡದ ಶಾಹಿಲ್ ಮುಕ್ಕ, ಕೂಳೂರು ಸುಲ್ತಾನುಲ್ ಆರಿಫೀನ್ ದಫ್ ತಂಡದ ರಶೀದ್ ಮುಕ್ಕ, ಪುತ್ತೂರು-ಸಂಪ್ಯ ರಿಫಾಯಿಯಾ ದಫ್ ತಂಡದ ಉನೈಸ್ ಸಂಪ್ಯ, ಅರಾಫತ್ ಸಂಪ್ಯ, ಸಿನಾನ್ ಸಂಪ್ಯ, ಹಾರಿಸ್ ಸಂಪ್ಯ, ಪುತ್ತೂರು-ಕಬಕ ಅಲ್-ಇಸ್ಲಾಹಿ ದಫ್ ತಂಡದ ಅನ್ಸಾರ್ ಕಬಕ, ತೌಸೀಫ್ ಕಬಕ, ಪುತ್ತೂರು-ಪರ್ಲಡ್ಕ ಹಯಾತುಲ್ ಇಸ್ಲಾಂ ದಫ್ ತಂಡದ ಸರ್ಫರಾಝ್ ಪರ್ಲಡ್ಕ, ಮೂಳೂರು ದಫ್ ತಂಡದ ರಶೀದ್ ಮೂಳೂರ್ ಪ್ರತಿನಿಧಿಸಿದ್ದರು. ಪುತ್ತೂರು-ಸಂಪ್ಯ ರಿಫಾಯಿಯ ದಫ್ ತಂಡದ ಹಾಡುಗಾರ ಆಶಿಕ್ ಸಂಪ್ಯ ಹಾಗೂ ಬಿ ಸಿ ರೋಡು-ಮಿತ್ತಬೈಲು ಶಂಸುಲ್ ಉಲಮಾ ದಫ್ ತಂಡದ ಹಾಡುಗಾರ ಶಾರುಖ್ ಎ ಕೆ ಪರ್ಲಿಯಾ-ಮಿತ್ತಬೈಲ್ ಅವರು ಹಾಡುಗಾರಿಕೆಯಲ್ಲಿ ಗಮನ ಸೆಳೆದರು.
ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಪೈಕಿ ದಫ್ ತಂಡದ ಪ್ರದರ್ಶನವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ವಿಶೇಷವಾಗಿ ಕೊಂಡಾಡಿದರು.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದಫ್ ತಂಡಗಳಲ್ಲಿ ದಫ್ ಕಲಾ ಪ್ರದರ್ಶನ ನೀಡುತ್ತಿದ್ದ ಬಳಿಕ ಉದ್ಯೋಗ ನಿಮಿತ್ತ ಯುಎಇ ದೇಶದ ವಿವಿಧೆಡೆ ಐದ್ಯೋಗಿಕ ನೆಲೆ ಕಂಡುಕೊಂಡಿರುವ ದಫ್ ಕಲಾಕಾರರನ್ನು ಒಂದೇ ವೇದಿಕೆಯಡಿ ಒಟ್ಟುಗೂಡಿಸಿ ದುಬೈ ಬೇ ಬೈಟ್ಸ್ ಪ್ರಾಯೋಜಕತ್ವ ನೀಡಿ ಈ ಅಲ್-ಫಲಾಹ್ ದಫ್ ತಂಡವನ್ನು ಸಿದ್ದಪಡಿಸಿ ಇದೀಗ ದುಬೈ ಗಡಿನಾಡ ಕನ್ನಡ ಉತ್ಸವದಲ್ಲಿ ದಫ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲೂ ದಫ್ ಕಲಾಕಾರರನ್ನು ಒಟ್ಟುಗೂಡಿಸಿ ದುಬೈಯಲ್ಲೂ ದಫ್ ಕಲೆಯ ಸ್ವಾದವನ್ನು ಅನಿವಾಸಿಗಳಿಗೂ ದುಬೈ ನಿವಾಸಿಗಳಿಗೂ ನೀಡಲಾಗುವುದು ಎಂದು ದಫ್ ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *