ಬಂಟ್ವಾಳ: ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಅಧ್ಯಕ್ಷ ಜಬ್ಬಾರ್ ಮಾರಿಪಳ್ಳ ಧ್ವಜಾರೋಹಣ ನೆರೆವೇರಿಸಿದರು. ಹಿರಿಯ ನಾಗರಿಕ ಎಫ್.ಎ ಖಾದರ್ ಅಮ್ಮೆಮಾರ್ ಹಾಗೂ ಪುದು ಗ್ರಾ.ಪಂ ಸದಸ್ಯೆ ಲಿಡೀಯಾ ಪಿಂಟೋ ರವರು ಸ್ವತಂತ್ರ ಉದ್ದೇಶಿಸಿ ಮಾತನಾಡಿದರು.
ಸ್ವತಂತ್ರ ಪ್ರಯುಕ್ತ ನಡೆಸಿದ ಕಾರ್ಯಕ್ರಮದಲ್ಲಿ ಮಂಗಳೂರು ಹಸಿ ಮೀನು ವ್ಯಾಪಾರಸ್ಥರ ಸಂಘ (ರಿ.) ಇದರ ಅಧ್ಯಕ್ಷರಾಗಿ ಅಯ್ಕೆಯಾದ ಸಾಮಾಜಿಕ ಶೈಕ್ಷಣಿಕ ಮುಂದಲೂ, ಕೊಡುಗೈ ದಾನಿಯಾದ ಇಸ್ಮಾಯಿಲ್ ಕೆ.ಇ.ಎಲ್ ರವರಿಗೆ ಸನ್ಮಾನಿಸಲಾಯಿತು.
ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ ಉಪಾಧ್ಯಕ್ಷರಾದ ಲತೀಫ್ ಅರಫಾ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಡೈಮಂಡ್ ಫರಂಗಿಪೇಟೆ, ಕಾರ್ಯದರ್ಶಿಗಳಾದ ಸಲಾಂ ಸುಜೀರ್, ಮಲೀಕ್ ಕುಂಪಣಮಜಲು, ಸದಸ್ಯರಾದ ಗಪೂರ್ ಫರಂಗಿಪೇಟೆ, ಇಕ್ಬಾಲ್ ಅರಫಾ, ಶಾಹುಲ್ ಹಮೀದ್ ಕುಂಪಣಮಜಲು, ಹರ್ಷಿ ವಳವೂರು, ಯುವ ಉದ್ಯಮಿ ಆಶೀರ್ ಮೇಲ್ಮನೆ, ಇಮ್ರಾನ್ ಅಮ್ಮೆಮಾರ್, ಇಸ್ಮಾಯಿಲ್ ಪಾವೂರು, ಸಯ್ಯದ್ ಬಾವ ಫರಂಗಿಪೇಟೆ, ಹಾಶೀಂ ಮಾರಿಪಳ್ಳ, ಮುಬಾರಕ್ ಕುಂಪಣಮಜಲು, ನಂ.01 ರಿಕ್ಷಾ ಪಾರ್ಕ್ ಇದರ ಅಧ್ಯಕ್ಷ ಫಾರೂಕ್ ಸುಜೀರ್, ಸದಸ್ಯರಾದ ರಶೀದ್ ಪಾವೂರು, ಇನ್ಸಾದ್ ಮಾರಿಪಳ್ಳ ಹಾಗೂ ಊರಿನ ಪ್ರಮುಖರು ಉಪಸ್ಥಿತರುದ್ದರು.
ಟ್ರಸ್ಟ್‌ನ ವೈದ್ಯಕೀಯ ಉಸ್ತುವಾರಿ ಹಾಶೀರ್ ಪೇರೀಮಾರ್ ಸ್ವಾಗತಿಸಿದರು. ಸದಸ್ಯರಾದ ಕೆ.ಎಮ್ ಅಶ್ರಫ್ ಮಲ್ಲಿ ಕಾರ್ಯಕ್ರಮ ನಿರೂಪಿಸಿದರು.