ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನೆಪದಲ್ಲಿ ಕಲ್ಲಡ್ಕದ ಜನರಿಗೆ ಧೂಳಿನ ಭಾಗ್ಯ ನೀಡಲಾಗಿದೆ. ಮಳೆ ಬಂದು ಹೋದರು ಧೂಳಿನಿಂದ ಕಲ್ಲಡ್ಕ ಜನತೆಗೆ ನೆಮ್ಮದಿ ಇಲ್ಲದಂತಾಗಿದೆ.
ದಿನಕ್ಕೆ ಮೂರು ಬಾರಿ ನೀರು ಚಿಮುಕಿಸುವುದನ್ನು ಮಾಡುತ್ತಿದ್ದರೂ, ಸಾವಿರಾರು ವಾಹನಗಳು ಸಾಗುವುದರಿಂದ ಧೂಳು ಎದ್ದು ಎದುರಿನ ವಾಹನ ಕಾಣದಾಗಿದೆ. ಸಂಚಾರಕ್ಕೆ ಪರ್ಯಾಯ ರಸ್ತೆ ಮಾಡದಿರುವುದರಿಂದ ದಯನೀಯ ಸ್ಥಿತಿ ಎದುರಾಗಿದೆ. ರಸ್ತೆಯ ಮಧ್ಯೆ ಹೊಂಡ ಬಿದ್ದಿರುವುದರಿಂದ ಅಲ್ಲಿ ಸಾಗುವುದೇ ದುಸ್ತರವಾಗಿದೆ.
ರಸ್ತೆ ಕಾಮಗಾರಿ ಇನ್ನೂ ಸಂಪೂರ್ಣವಾಗದೆ ಅತ್ತ ಕಡೆ ಸರ್ವೀಸ್ ರಸ್ತೆಯು ಹೊಂಡಗಳಿಂದ ಸಂಪೂರ್ಣವಾಗಿ ಹದಗೆಟ್ಟಿದೆ.
ಎಷ್ಟೇ ಪ್ರತಿಭಟನೆ ಮಾಡಿದರು ಅಧಿಕಾರಿಗಳು ಬಂದರು ಕೂಡ ಕಲ್ಲಡ್ಕ ಪರಿಸರ ಜನತೆಗೆ ಧೂಳಿನಿಂದ ಮುಕ್ತಿ ಯಾವಾಗ ಎಂದು ನೋಡಬೇಕಾಗಿದೆ.
ಇನ್ನೊಂದೆಡೆ ಕೇರಳದಲ್ಲಿ ಬಿಜೆಪಿಯ ಬದ್ಧ ವಿರೋಧಿ ಎಡರಂಗದ ಆಡಳಿತ ಇದೆ. ಹಾಗಿದ್ದರೂ, ಕೇಂದ್ರ ಸರಕಾರದ ಅಧೀನದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅತ್ಯಂತ ಸುವ್ಯವಸ್ಥಿತವಾಗಿ ಕೆಲಸದಲ್ಲಿ ತೊಡಗಿದೆ. ಕೇರಳ ಭಾಗದಲ್ಲಿ ಪ್ರತ್ಯೇಕವಾಗಿ ಸರ್ವಿಸ್ ರೋಡ್ ಮಾಡುತ್ತಿರುವುದು ಗಮನ ಸೆಳೆಯುತ್ತದೆ.