December 22, 2024
Tippu

ಮಂಡ್ಯ: 87ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಜರುಗಲಿದೆ. ಸಮ್ಮೇಳನದ ಆರಂಭಕ್ಕೂ ಮೊದಲೇ ಇದೀಗ ಟಿಪ್ಪು ಸುಲ್ತಾನ್ ಬಗೆಗಿನ ವಿಚಾರ ಸಂಕಿರಣದ ವಿವಾದ ಹುಟ್ಟಿಕೊಂಡಿದೆ.

ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್ ವಿಚಾರ ಸಂಕಿರಣವನ್ನು ನಡೆಸಬೇಕೆಂದು ಪ್ರಗತಿಪರರು ಆಗ್ರಹ ಮಾಡ್ತಾ ಇದ್ದರೆ, ಇನ್ನೊಂದೆಡೆ ಹಿಂದೂ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.

ಮಂಡ್ಯದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರನ್ನು ನೆನೆಯಬೇಕು. ಇವರಿಗಿಂತ ಹೆಚ್ಚಾಗಿ ಟಿಪ್ಪು ಸುಲ್ತಾನ್ ಅವರನ್ನು ನೆನಯಬೇಕು. ಟಿಪ್ಪು ರೈತರಿಗೆ, ಜನ ಸಾಮಾನ್ಯರಿಗೆ ಹಾಗೂ ಮಂಡ್ಯ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಟಿಪ್ಪು ಆಡಳಿತ ವ್ಯವಸ್ಥೆಯನ್ನು ನಾವು ಇಂದಿಗೂ ಸಹ ಅಳವಡಿಸಿಕೊಂಡಿದ್ದೇವೆ, ಹೀಗಿರುವಾಗ ಟಿಪ್ಪು ನೆನೆಯುವುದು ನಮ್ಮ ಕರ್ತವ್ಯ ಎಂದು ಪ್ರಗತಿಪರರು ಪಟ್ಟು ಹಿಡಿದಿದ್ದಾರೆ.

ಮಂಡ್ಯದಲ್ಲಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಕುರಿತ ವಿಚಾರ ಗೋಷ್ಠಿ ಇರಲೇಬೇಕೆಂದು ಪ್ರಗತಿಪರ ಚಿಂತಕ ಜಗದೀಶ್ ಕೊಪ್ಪ ಆಗ್ರಹ ಮಾಡಿದ್ದಾರೆ.

ಇನ್ನೂ ಇದಕ್ಕೆ ಹಿಂದೂ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಟಿಪ್ಪು ಒಬ್ಬ ಕನ್ನಡ ಹಾಗೂ ಹಿಂದೂ ವಿರೋಧಿಯಾಗಿದ್ದ. ಈತ ಕನ್ನಡದ ಬದಲು ಪರ್ಷಿಯನ್ ಭಾಷೆಗೆ ಹೆಚ್ಚು ಒಲವು ನೀಡುತ್ತಿದ್ದ ವ್ಯಕ್ತಿ. ಇಂತಹ ವ್ಯಕ್ತಿಯ ವಿಚಾರ ಸಂಕೀರ್ಣವನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಲು ಮುಂದಾದರೆ ನಾವು ತಡೆಯುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *