December 23, 2024
IMG-20240917-WA0026

ಬಂಟ್ವಾಳ: ಕೋಮು ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ ಆರೋಪದ ಮೇಲೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಮತ್ತು ಕೊಲೆ ಆರೋಪಿ ಭರತ್ ಕುಮ್ಡೆಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಸ್ಲಿಂ ಧರ್ಮ ಮತ್ತು ಪುರಸಭೆಯ ಸದಸ್ಯ ಮಹಮ್ಮದ್ ಶರೀಫ್ ಎಂಬವರನ್ನು ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ ಶರಣ್ ಪಂಪ್ ವೆಲ್ ಮತ್ತು ಭರತ್ ಕುಮ್ಡೆಲ್ ವಿರುದ್ಧ ಮಹಮ್ಮದ್ ರಫೀಕ್ ಕೆಳಗಿನ ಪೇಟೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸೋಮವಾರ ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಭಜರಂಗದಳ- ವಿಎಚ್.ಪಿ ಯವರ ಬಿಸಿರೋಡ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶರಣ್ ಪಂಪ್ ವೆಲ್ ಹಾಗೂ ಭರತ್ ಕುಮ್ಡೆಲು ಮುಸ್ಲಿಂ ಸಮುದಾಯದ ಭಾವನೆಗೆ ಮತ್ತು ಧರ್ಮದ ಘನತೆಗೆ ಧಕ್ಕೆ ಉಂಟಾಗುವಂತೆ ಮತ್ತು ಪ್ರಚೋದನಾಕಾರಿ ಭಾಷಣದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಮಾತನಾಡಿ, ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ದ್ವೇಷ ಸಂಘರ್ಷ ಉಂಟಾಗುವ ರೀತಿಯಲ್ಲಿ ಮಾತನಾಡಿದ್ದಲ್ಲದೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಾಗಾಗಿ ಇವರಿಬ್ಬರ ಮೇಲೆ ಕಾನೂನು ಕ್ರಮ ಜರಗಿಸಿ ಎಂದು ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *