ಬಂಟ್ವಾಳ :ಬ್ರದರ್ಸ್ ಟಿಪ್ಪುನಗರ, ಹಾಗೂ ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಮಂಗಳೂರು ಹಾಗೂ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಮರ್ಹೂಂ ಸಲ್ಮಾನ್ ಫಾರಿಸ್ ಸ್ಮರಣಾರ್ಥಕ ಅಂಗವಾಗಿ ಬೃಹತ್ ರಕ್ತದಾನ ಶಿಬಿರವು ಬದ್ರ್ ಜುಮಾ ಮಸೀದಿ ವಠಾರ ಟಿಪ್ಪುನಗರ ಲೊರೆಟ್ಟೋ ಪದವುವಿನಲ್ಲಿ ಇಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಇರ್ಷಾದ್ ದಾರಿಮಿ ಮಿತ್ತಬೈಲ್ ಉಸ್ತಾದ್ ರವರು ನೆರೆವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆಎಂ ಅಬ್ದುಲ್ಲ ಮುಸ್ಲಿಯಾರ್ ಮಾಜಿ ಖತೀಬರು ಬದ್ರ್ ಜುಮಾ ಮಸೀದಿ, ಅನ್ವರ್ ದಾರಿಮಿ ಅಜ್ಜಾವರ ಖತೀಬರು ಬದ್ರ್ ಜುಮಾ ಮಸೀದಿ, ವಾಸು ಪೂಜಾರಿ ಅಧ್ಯಕ್ಷರು ಬಂಟ್ವಾಳ ಪುರಸಭೆ, ಮುನೀಶ್ ಅಲಿ ಉಪಾಧ್ಯಕ್ಷರು ಬಂಟ್ವಾಳ ಪುರಸಭೆ ಹಾಗೂ ಊರಿನ ಸಂಘ ಸಂಸ್ಥೆಗಳು ನಾಗರಿಕರು ಭಾಗವಹಿಸಿದ್ದರು.
ಶಿಬಿರದಲ್ಲಿ 100 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು