December 23, 2024
IMG-20240918-WA0151

ಮಂಗಳೂರು : ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಪ್ರಕಾಶ್ ಕುಂಪಲ ರವರ ಅಪ್ಪಟ್ಟ ಶಿಷ್ಯ ಮಿತೇಶ್ ಪೂಜಾರಿ ಕಣಕ್ಕಿಲಿದಿದ್ದಾರೆ.


ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಿತೇಶ್ ಪೂಜಾರಿ ಸರ್ವ ಧರ್ಮಿಯರೊಂದಿಗೆ ಉತ್ತಮ ಬಾಂಧವ್ಯದಲ್ಲಿ ಇದ್ದಾರೆ.
ಈ ಬಾರಿ ಪ್ರಕಾಶ್ ಕುಂಪಲ ಸಾರಥ್ಯದಲ್ಲಿ ತೊಕ್ಕೊಟ್ಟಿನಲ್ಲಿ ಪ್ರಥಮ ವರ್ಷದ ಅದ್ದೂರಿ ಮೊಸರುಕುಡಿಕೆ ನಡೆದಿದ್ದು, ತುಳುನಾಡಿನ ಸಂಸ್ಕೃತಿಯಾದ ಹುಲಿವೇಷ ಮತ್ತು ದೃಷ್ಯರೂಪಕಗಳು ಮೆರಗು ನೀಡಿತ್ತು. ಪ್ರಕಾಶ್ ಕುಂಪಲ ರವರ ಸಾರಥ್ಯದಲ್ಲಿ ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಿತೇಶ್ ರಕ್ತದಾನ ಶಿಬಿರ ಬಡವರಿಗೆ ಮನೆ ನಿರ್ಮಾಣ, ಕ್ರೀಡೆ ಪಟ್ಟುಗಳಿಗೆ ಪ್ರೋತ್ಸಾಹ , ಧಾರ್ಮಿಕ ಕ್ಷೇತ್ರಗಳಿಗೆ ಧನ ಸಹಾಯ ಮಾಡುವ ಮೂಲಕ ಜನರಲ್ಲಿ ಮನೆ ಮಾತಾಗಿದ್ದಾರೆ.

ಪ್ರಕಾಶ್ ಕುಂಪಲ ರವರು ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಧರ್ಮದ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಉಳ್ಳಾಲ ತಾಲೂಕಿನ ವಿವಿಧ ಸಂಘಟನೆ, ಸಂಘಸಂಸ್ಥೆಗಳ ಬೆಂಬಲವಿದ್ದು‍, ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇದು ವಿತೇಶ್ ಪೂಜಾರಿಯವರಿಗೆ ಆನೆ ಬಲ ಬಂದತಾಗಿದೆ.

ಸ್ಥಳೀಯ ಶಾಸಕರಾದ ಯು.ಟಿ. ಖಾದರ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ನಿರ್ದೇಶನದಂತೆ ಕ್ಷೇತ್ರದಲ್ಲಿ ಯುವಕರನ್ನು ಒಟ್ಟುಗೂಡಿಸಿ ಪಕ್ಷ ಸಂಘಟಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ ಮಿತೇಶ್ ಪೂಜಾರಿ, ಯಾವುದೇ ಸ್ಥಳೀಯ ಚುನಾವಣೆ ಇದ್ದರು ಪಕ್ಷದ ಮುಂದಾಳತ್ವವನ್ನು ವಹಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪರಿಶ್ರಮವನ್ನು ಪಡುತ್ತಾರೆ. ಈ ಬಾರಿ ಮಿತೇಶ್ ಪೂಜಾರಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಜನಸೇವೆ ಮಾಡಲು ಅವಕಾಶ ಮಾಡಿ ಕೊಡಬೆಕೇಂದು ಅವರ ಬೆಂಬಲಿಗರ ಆಗ್ರಹ .

Leave a Reply

Your email address will not be published. Required fields are marked *