ಉಡುಪಿ : ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾಗಿ ಅಪಾರ ಜನ ಸೇವೆ ಮಾಡಿದ್ದ ಡಿ. ಆರ್. ರಾಜು ಇಂದು ಹೃದಯ ವೈಫಲ್ಯದಿಂದ ನಿಧನರಾಗಿದ್ದು ಸಭಾಧ್ಯಕ್ಷ ಯು ಟಿ ಖಾದರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.
ರಾಜಕೀಯ ಕ್ಷೇತ್ರ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿದ್ದ ಅವರ ಸಾಧನೆ ಅಪಾರವಾದುದು ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ,ಭಗವಂತ ಅವರ ಆತ್ಮಕೆ ಚಿರಶಾಂತಿ ನೀಡಲಿ,ಕುಟುಂಬ ವರ್ಗ ದವರಿಗೆ ಹಿತೈಷಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲು ಪ್ರಾರ್ಥಿಸುವುದಾಗಿ ಯು ಟಿ ಖಾದರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.