December 22, 2024
IMG-20240919-WA0025


ಕಾಸರಗೋಡು: ಗೇಟ್ ಮಗುಚಿ ಬಿದ್ದು ಎರಡೂವರೆ ವರ್ಷದ ಬಾಲಕ ಮೃತಪಟ್ಟ ಘಟನೆ ಮಾಂಙಾಡ್ ನಲ್ಲಿ ನಡೆದಿದೆ. ಉದುಮ ಪಳ್ಳದ ತೆಕ್ಕೇಕರೆಯ ಮಾಹಿನ್ ರಾಸಿ ರೆಹಿಮಾ ದಂಪತಿ ಪುತ್ರ ಅಬು ತ್ವಾಹೀರ್ ಮೃತ ಪಟ್ಟ ಮಗು ಎಂದು ಗುರುತಿಸಲಾಗಿದೆ.

ಮಾಂಙಾಡ್ ನ ಸಂಬಂಧಿಕರ ಮನೆಯಲ್ಲಿ ಈ ಘಟನೆ ನಡೆದಿದೆ. ಆಟವಾಡುತ್ತಿದ್ದ ಬಾಲಕನ ಮೇಲೆ ಕಬ್ಬಿಣದ ಗೇಟ್ ಬಿದ್ದಿದ್ದು, ಅದರಡಿ ಸಿಲುಕಿದ ಬಾಲಕನನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *