ಮಂಗಳೂರು: ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ (ರಿ) ಬರ್ಕೆ, ಮಂಗಳೂರು ಇದರ ವತಿಯಿಂದ 2025ರ ಫೆಬ್ರವರಿ 9ರಂದು ಮಂಗಳೂರಿನ ಬೋಳಾರದ ಶಾದಿಮಹಲ್ ನಲ್ಲಿ ಆರ್ಥಿಕವಾಗಿ ಬಡ, ನಿರ್ಗತಿಕ ಏಳು ಹೆಣ್ಣು ಮಕ್ಕಳ ಮದುವೆ ಮಾಡಲು ತಿರ್ಮಾನಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ಆಸಕ್ತ ಅರ್ಹರು 2025ರ ಜನವರಿ 30ರ ಒಳಗಾಗಿ ಅರ್ಜಿಯನ್ನು ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ಅಝೀಝುದ್ದೀನ್ ರಸ್ತೆ, ಬಂದರ್, ಮಂಗಳೂರಿನ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂ.: 9019144555, 9945999806 ಅನ್ನು ಸಂಪರ್ಕಿಸುವಂತೆ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಆರಿಫ್ ಮಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.