December 22, 2024
IMG-20241219-WA0010


ಫರಂಗಿಪೇಟೆ: ಟಯರ್ ಸ್ಫೋಟಗೊಂಡು ಟೆಂಪೋ ಟ್ರಾವೆಲರ್ ಪಲ್ಟಿಯಾದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಹೂ ತರುತ್ತಿದ್ದ ಟಿಟಿ ಇಂದು ಮುಂಜಾನೆ 7ಗಂಟೆಯ ವೇಳೆ ನಡೆದಿದೆ.


ಅಡ್ಯಾರ್ ನಲ್ಲಿ ಕಾರ್ಯಕ್ರಮ ನಿಮಿತ್ತ ಹೂ ಅಲಂಕಾರ ನಡೆಸುವುದಕ್ಕಾಗಿ ಬೆಂಗಳೂರಿನಿಂದ ಅಲಂಕಾರಿಕ ಹೂ ತುಂಬಿಸಿಕೊಂಡು ಹೊರಟಿದ್ದ ಟ್ರಾವೆಲರ್ ಫರಂಗಿಪೇಟೆ ಬರುವಷ್ಟರಲ್ಲಿ ಟಯರ್ ಬ್ಲಾಸ್ಟ್ ಆಗಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ವಾಹನದಲ್ಲಿದ್ದ ಹನ್ನೊಂದು ಮಂದಿ ಡೆಕೋರ್ ಕಾರ್ಮಿಕರು ಅದೃಷ್ಟವಶಾತ್ ಯಾವುದೇ ಗಯಾಗಳಾಗದೇ ಪಾರಾಗಿದ್ದಾರೆ.

Leave a Reply

Your email address will not be published. Required fields are marked *