April 17, 2025

ವೈಟ್ ಲೋಸ್ ಚಾಲೆಂಜಿನ ವಿಜೇತರಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ

ದುಬೈ: ಅಬಿಟೋಸ್ ಫಿಟ್ನೆಸ್ ದೇರಾ ದುಬೈ ನಡೆಸಿದ ವೈಟ್ ಲೋಸ್ ಚಾಲೆಂಜಿನ ವಿಜೇತರಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ದಿನಾಂಕ 11-01-2025 ಶನಿವಾರದಂದು ದುಬೈ ದೇರಾ ಆಫೀಸಿನಲ್ಲಿ ನಡೆಯಿತು.

ಕೇವಲ ಒಂದು ತಿಂಗಳಲ್ಲಿ 14 ಕೆಜಿ ತೂಕ ಕಡಿಮೆ ಮಾಡುವ ಮೂಲಕ ಅಬ್ದುಲ್ ಜಲೀಲ್ ಹೆಂತಾರ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕರಾದ ಜಮೀರ್ ಪುತ್ತನ್ವೀಟಿಲ್ ರವರು ವಿಜೇತರನ್ನು ಶ್ಲಾಘಿಸಿ ಸನ್ಮಾನಿಸಿ ಮಾತನಾಡಿದ ಅವರು ತಮ್ಮ ಸಂಸ್ಥೆಯು ಹಲವಾರು ವರ್ಷಗಳಿಂದ ಹಲವರ ದೇಹದ ತೂಕ ಆರೋಗ್ಯಕರವಾಗಿ ಕಡಿಮೆ ಮಾಡುವಲ್ಲಿ ಸಫಲವಾಗಿದೆ ಎಂದರು.

ಈ ಚಾಲೆಂಜಿನಲ್ಲಿ ವಿಜೇತರಾದ ಸಂಶೀನ ಅನಸ್, ಅನಸ್ ನಟ್ಟುವಯಲಿಲ್, ಕಿರಣ್ ರಾಜ್ ಮತ್ತು ಅಸ್ಕರಲಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆಯ ಮ್ಯಾನೇಜರ್ ನಾಸಿರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.