

ಮೂಡಬಿದ್ರೆ: ಸಮಸ್ತ ವಿದ್ಯಾಬ್ಯಾಸ ಮಂಡಳಿ (SKIMVB) ನಡೆಸಿದ 2024-25 ನೇ ಸಾಲಿನ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಪೆರಾಡಿ ಖುವ್ವತುಲ್ ಇಸ್ಲಾಂ ಮದ್ರಸದ (ರಿ.ನಂ. 7169) ಐದನೇ ತರಗತಿ ವಿದ್ಯಾರ್ಥಿನಿ ಆಲಿಮಾ ಕೆ. ಟಾಪ್ ಪ್ಲಸ್ ಶ್ರೇಣಿಯೊಂದಿಗೆ ತೇರ್ಗಡೆಗೊಂಡು ಮೂಡಬಿದ್ರೆ ರೇಂಜಿನಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಗಳೂ, ದಾರನ್ನೂರು ಎಜ್ಯುಕೇಶನ್ ಸೆಂಟರ್ ಕಾಶಿಪಟ್ನ ಇದರ ಅದ್ಯಕ್ಷರೂ ಆದ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ಪುತ್ರ ಹುಸೈನ್ ರಹ್ಮಾನಿ ಹಾಗೂ ಆಯಿಶತ್ ಸಿದ್ಧೀಕಾ ದಂಪತಿಗಳ ಪುತ್ರಿಯಾಗಿದ್ದು, ಕಳೆದ ಒಂದು ವರ್ಷಗಳಿಂದ ಪೆರಾಡಿ ಖುವ್ವತುಲ್ ಇಸ್ಲಾಂ ಮದ್ರಸದಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದಾಳೆ. ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುತ್ತಿದ್ದು, ವಾರ್ಷಿಕ ಪರೀಕ್ಷೆಯಲ್ಲಿ ಟಾಪ್ ಪ್ಲಸ್ ಶ್ರೇಣಿ ಪಡೆಯುವುದರ ಮೂಲಕ ಈ ಸಾಧನೆ ಮಾಡಿದ್ದಾಳೆ.
ಇದಲ್ಲದೇ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಇತರ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,ಫಸ್ಟ್ ಕ್ಲಾಸ್ ಶ್ರೇಣೆಯೊಂದಿಗೆ ಮದ್ರಸಕ್ಕೆ ಶೇಕಡಾ ನೂರು ಫಲಿತಾಂಶ ಬಂದಿದ್ದು ಇದರೊಂದಿಗೆ ಮದ್ರಸಕ್ಕೂ, ಅಧ್ಯಾಪಕರಿಗೂ, ಆಡಳಿತ ಸಮಿತಿಗೂ, ಪೋಷಕರಿಗೂ ವಿದ್ಯಾರ್ಥಿಗಳು ಹೆಮ್ಮೆ ತಂದು ಕೊಟ್ಟಿದ್ದಾರೆ.