

ಮಂಗಳೂರು: ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಂದ್ ಯಾವುದೇ ಪರಿಣಾಮವನ್ನು ಬೀರದೇ ಎಂದಿನಂತೆ ಜನಜೀವನ ಯಾವುದೇ ಅಡಚಣೆಯಿಲ್ಲದೆ ಮುಂದುವರೆಯಿತು.
ಮಂಗಳೂರಿಗೆ ‘ಕರ್ನಾಟಕ ಬಂದ್’ ಬಿಸಿ ತಟ್ಟಿಲ್ಲ. ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಬಸ್ ಸಂಚಾರ ಪ್ರತಿದಿನದಂತೆ ಯಥಾಸ್ಥಿತಿಯಲ್ಲಿದೆ.
ಕರ್ನಾಟಕ ಬಂದ್ ಗೆ ದ.ಕ.ಜಿಲ್ಲೆಯಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಖಾಸಗಿ ಸಿಟಿ ಬಸ್, ಸರ್ವಿಸ್ ಬಸ್, ಎಕ್ಸ್ಪ್ರೆಸ್ ಬಸ್ ಸೇರಿದಂತೆ ಕೆಎಸ್ಆರ್ಟಿಸಿ ಕೂಡ ಎಂದಿನಂತೆ ಸಂಚಾರದಲ್ಲಿ ನಿರತವಾಗಿದೆ.
ಜಿಲ್ಲೆಯಲ್ಲಿ ಹೊಟೇಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು, ವ್ಯಾಪಾರ-ವಹಿವಾಟುಗಳು ಏನೂ ತೊಂದರೆ ಇಲ್ಲದೆ ಸಾಂಗವಾಗಿ ನಡೆಯುತ್ತಿದೆ.
ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಎಂದಿನಂತೆ ಸಂಚರಿಸಿದವು. ಆಟೋರಿಕ್ಷಾಗಳು ಮತ್ತು ಕ್ಯಾಬ್ ಗಳು ಸೇವೆಯಲ್ಲಿವೆ. ಅಂಗಡಿಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು. ಯಾವುದೇ ಅಂಗಡಿಗಳು, ಸಂಸ್ಥೆಗಳು ಮುಚ್ಚಿರುವ ಬಗ್ಗೆ ವರದಿಯಾಗಿಲ್ಲ.