December 21, 2024
WhatsApp-Image-2024-11-22-at-9.07.18-AM

ಕಾಸರಗೋಡು ಚಂದೇರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ದಿವ್ಯಶ್ರೀ (35) ಕೊಲೆ ಗೀ ಡಾ ರವರು. ಪತಿ ರಾಜೇಶ್ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ.

ಗಂಭೀರ ಗಾಯ ಗೊಂಡ ದಿವ್ಯಶ್ರೀ ರನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ದಿವ್ಯ ಶ್ರೀ ಹಾಗೂ ಆಟೋ ಚಾಲಕನಾಗಿರುವ ರಾಜೇಶ್ ನಡುವೆ ದಾಂಪತ್ಯ ಸಮಸ್ಯೆ ಉಂಟಾಗಿತ್ತು .ಇದರಿಂದ ಕೆಲ ದಿನ ಗಳಿಂದ ಇಬ್ಬರೂ ಬೇರ್ಪಟ್ಟು ವಾಸವಾಗಿದ್ದರು ಎನ್ನಲಾಗಿದೆ.

ಸಂಜೆ ತಲವಾರು ತೆಗೆದುಕೊಂಡು ಬಂದ ರಾಜೇಶ್ ದಿವ್ಯಶ್ರೀ ಮೇಲೆ ಹಲ್ಲೆ ನಡೆಸಿದ್ದು, ಮುಖ ಹಾಗೂ ಕುತ್ತಿಗೆಗೆ ಗಂಭೀರ ಗಾಯ ಗೊಂಡಿದ್ದರು. ತಡೆಯಲು ಬಂದ ದಿವ್ಯಶ್ರೀ ತಂದೆ ವಾಸುರವರಿಗೂ ಗಾಯಗಳಾಗಿವೆ. ಬೊಬ್ಬೆ ಕೇಳಿ ಪರಿಸರ ವಾಸಿಗಳು ದಾವಿಸಿ ಬಂದಾಗ ರಾಜೇಶ್ ಪರಾರಿಯಾಗಿದ್ದನು.ಪಯ್ಯನ್ನೂರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ . ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *