ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆ ಮತ್ತು
ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ಜಂಟಿ ಆಶ್ರಯದಲ್ಲಿ ಜಿಲ್ಲಾಸ್ಪತ್ರೆಯ ಬ್ರೈನ್ ಹೆಲ್ತ್ ಕ್ಲಿನಿಕ್ ವತಿಯಿಂದ ಉದ್ಯಾವರ ,ಗುಡ್ಡೆಅಂಗಡಿ “ಕನಸಿನ ಮನೆ”
ವೃಧ್ಧಾಶ್ರಮ ದಲ್ಲಿ ಹಿರಿಯ ನಾಗರಿಕರಿಗೆ ಮರೆವು ಕಾಯಿಲೆಯ ಬಗ್ಗೆ ಜಾಗೃತಿ ಮತ್ತು ವಯಸ್ಕರಿಗೆ ನೆನಪಿನ ಶಕ್ತಿಯ ಪರೀಕ್ಷೆಯನ್ನು ಸೈಕಾಲಜಿಸ್ಟ್ ಅಬ್ದುಲ್ ಸಮದ್ ಮತ್ತು ತಂಡದ ವತಿಯಿಂದ ನಡೆಸಲಾಯಿತು.
ಕಾರ್ಯಕ್ರಮದ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳ ಕುರಿತಾದ ಮಾಹಿತಿಯನ್ನು ಉಪಕ್ರಮದ ಜಿಲ್ಲಾ ಸಂಯೋಜಕಿ ಅನುಷಾ ನೀಡಿದರು. ಆಶ್ರಮ ವಾಸಿಗಳಿಗೆ ವಯೋಸಹಜ ಕಾಯಿಲೆ ಬಗ್ಗೆ ನರ್ಸಿಂಗ್ ಆಫಿಸರ್ ರಾಮ್ ಕುಮಾರ್ ಮಾಹಿತಿ ನೀಡಿ ಪರೀಕ್ಷೆ ನಡೆಸಿದರೆ ಫಿಸಿಯೋತೆರಪಿಸ್ಟ್ ನೇಹಾ ಪ್ರೀಮಲ್ ದೈಹಿಕ ವ್ಯಾಯಾಮದ ಮಹತ್ವ ತಿಳಿಸಿದರು,ಕಾರ್ಯಕ್ರಮವನ್ನು ಆಶ್ರಮದ ಮೇಲ್ವಿಚಾರಕಿ ಕವಿತಾ ಸ್ವಾಗತಿಸಿ ವಂದಿಸಿದರು.