ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಫೋಟೋ ವೈರಲ್ ಆಗಿದೆ.ಪರಪ್ಪನ ಅಗ್ರಹಾರದಲ್ಲಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಜೈಲಿನ ಸ್ಪೆಷೆಲ್ ಬ್ಯಾರೆಕ್‌ನ ಹೊರಗಡೆ ಕೂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ದರ್ಶನ್, 11ನೇ ಆರೋಪಿ ನಾಗರಾಜ್, ರೌಡಿಶೀಟರ್ ವಿಲ್ಸನ್ ನಾಗರಾಜ್ ಹಾಗೂ ಇನ್ನೊಬ್ಬರ ಜೊತೆ ಜೈಲಿನ ವಿಡಿಯೋ ಕಾನ್ಫೆರೆನ್ ಹಾಲ್‌ನ ಹಿಂಭಾಗದ ಸ್ಥಳದಲ್ಲಿ ಕೂತಿದ್ದಾರೆ. ದರ್ಶನ್ ಖುರ್ಚಿ ಮೇಲೆ ಕೂತು ಕೈಯಲ್ಲಿ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಕಾಫಿ ಕಪ್ ಹಿಡಿದುಕೊಂಡಿರುವುದು ಫೋಟೋದಲ್ಲಿ ಕಂಡುಬಂದಿದೆ