December 23, 2024
IMG-20240925-WA0039

ಮಂಗಳೂರು: ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವ ನೀಡುವ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಸಪ್ಟೆಂಬರ್ 28,29 ರಂದು ನಡೆಯಲಿರುವ ‘ಮೀಂ ಕವಿಗೋಷ್ಟಿ’ ಗೆ ಕರ್ನಾಟಕದ ಯುವ ಬರಹಗಾರ, ಕವಿ ಸಫ್ವಾನ್ ಸಅದಿ ಅಳಕೆ ಆಯ್ಕೆಯಾಗಿದ್ದಾರೆ.

ಪೈಗಂಬರ್ ಮುಹಮ್ಮದರ ಜನ್ಮದಿನದ ಅಂಗವಾಗಿ ವರ್ಷಂಪ್ರತಿ ನಾಲೆಡ್ಜ್ ಸಿಟಿಯಲ್ಲಿ ನಡೆಯುವ ಈ ಕವಿಗೋಷ್ಟಿಯಲ್ಲಿ ದೇಶದ ನಾನಾ ಭಾಗಗಳಿಂದ ಕವಿಗಳು ಭಾಗವಹಿಸುತ್ತಿದ್ದು ಬಹುಭಾಷಾ ಕವಿಗೋಷ್ಟಿ ಜರಗುತ್ತದೆ. ಈ ಕವಿಗೋಷ್ಟಿಗೆ ಸಫ್ವಾನ್ ರವರ ‘ಪ್ರವಾದಿಯ ಮಾದರಿ ಬದುಕು’ ಎಂಬ ಕವನ ಆಯ್ಕೆಯಾಗಿದ್ದು ಅವರು ಕವನ ವಾಚಿಸಲಿದ್ದಾರೆ.

ಪೇರಮೊಗರು ಮುದರ್ರಿಸ್ ಶೈಖುನಾ ಶರಫುದ್ದೀನ್ ಸಅದಿಯ ಶಿಷ್ಯರಾದ ಸಫ್ವಾನ್, ಈ ಹಿಂದೆ ಹಲವಾರು ಕವಿಗೋಷ್ಟಿಯಲ್ಲಿ ಭಾಗವಹಿಸಿ ಪ್ರಶಸ್ತಿ ಭಾಜನರಾಗಿದ್ದು ಪ್ರಸ್ತುತ ಮದ್ರಸಾ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *